ಅಮೇರಿಕಾ:- ಸೆಪ್ಟೆಂಬರ್ ತಿಂಗಳಿನಲ್ಲಿ ಒಂದೇ ರಾತ್ರಿಯಲ್ಲಿ ಮೂರು ಮಿಲಿಯನ್ ಜೇನುನೊಣಗಳ ಸಾವುಗೀಡಾಗಿದ ಘಟನೆ ಕ್ಯಾಲಿಫೋರ್ನಿಯಾ ಅಭಯಾರಣ್ಯದಲ್ಲಿ ಜರುಗಿದೆ.
ಮೂರು ಬಿಲಿಯನ್ ಜೇನುನೊಣ ಸಾವಿನ ಹಿಂದಿನ ರಹಸ್ಯವನ್ನು ಯುಸ್ ಕೃಷಿ ಇಲಾಖೆ (USDA)ಯ ತಜ್ಞರು ಬಹಿರಂಗಪಡಿಸಿದ್ದು ಜೇನುನೊಣಗಳು ಫಿಪ್ರೊನಿಲ್ ಎಂಬ ರಾಸಾಯನಿಕ ವಿಷ ಸೇವಿಸಿ ಸಾವುಗೀಡಾಗಿವೆ ಎಂದು ತಿಳಿಸಿದ್ದಾರೆ.
ಜೇನುನೊಣಗಳ ಸಾಮೂಹಿಕ ಸಾವು ಸೆಪ್ಟೆಂಬರ್ನಲ್ಲಿ ನಡೆದಿತ್ತು. ಯುಎಸ್ಡಿಎ ತನ್ನ ಸಂಶೋಧನೆಗಳನ್ನು ಈ ತಿಂಗಳು ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಆದರೆ ಜೇನುನೊಣಗಳು ವಿಷಕಾರಿ ರಾಸಾಯನಿಕ ವಸ್ತುವನ್ನು ಹೇಗೆ ಸೇವಿಸಿದ್ದವು ಎಂಬ ಮಾಹಿತಿ ಇನ್ನೂ ನಿಗೂಢವಾಗಿದೆ.
ಜೇನುನೊಣ ಅಭಯಾರಣ್ಯದ ಕೆಲಸಗಾರ ಡೊಮಿನಿಕ್ ಪೆಕ್ ಮಾತನಾಡಿ, ಈ ಘಟನೆ ನೋವು ಉಂಟುಮಾಡಿದೆ. ಎಲ್ಲಾ ಹತ್ತಿರದ ತೋಟಗಳಲ್ಲಿ ಫಿಪ್ರೊನಿಲ್ ಬಳಕೆಯ ಬಗ್ಗೆ ಇನ್ನೂ ವರದಿಯಾಗಿಲ್ಲ. ಫಿಪ್ರೊನಿಲ್ ಮನುಷ್ಯರಿಗೆ ಹಾನಿಕಾರಕವಾಗಿದೆ. ಇದು ಬೆವರುವುದು, ವಾಕರಿಕೆ, ವಾಂತಿ, ತಲೆನೋವು, ಹೊಟ್ಟೆ ನೋವು, ತಲೆತಿರುಗುವಿಕೆ ಮತ್ತು ರೋಗಗ್ರಸ್ತವಾಗುವಿಕೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.