ಬಾದಾಮಿ ದೇಹದಲ್ಲಿ ತುಂಬಾ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಬಾದಾಮಿಯನ್ನು ನೆನೆಸಿ ತಿಂದರೆ ಪ್ರಯೋಜನಗಳು ವರ್ಧಿಸುತ್ತವೆ.
ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಏನೆಲ್ಲಾ ಪ್ರಯೋಜವಾಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ
ತೀಕ್ಷ್ಣ ಮನಸ್ಸಿಗೆ
ಆರೋಗ್ಯಕರ ಹೃದಯ:- ಬಾದಾಮಿಯಲ್ಲಿ ಆಂಟಿ ಆಕ್ಸಿಡೆಂಟ್ಗಳ ಜೊತೆಗೆ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಕಂಡುಬರುತ್ತವೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆ
ನೆನೆಸಿದ ಬಾದಾಮಿ ಫೈಬರ್ ಮತ್ತು ವಿಟಮಿನ್ E ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮಲಬದ್ಧತೆಯೊಂದಿಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಹೋರಾಡಲು, ನೆನೆಸಿದ ಬಾದಾಮಿ ಸೇವಿಸುವುದು ಒಳ್ಳೆಯದು.
ಸಕ್ಕರೆ ಮಟ್ಟ
ನೆನೆಸಿದ ಬಾದಾಮಿಯಲ್ಲಿ ಮೆಗ್ನೀಸಿಯಮ್ ಇದ್ದು, ಇದರ ಸೇವನೆಯು ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹ ರೋಗಿಗಳು ದಿನಕ್ಕೆ 6 ರಿಂದ 8 ಬಾದಾಮಿಗಳನ್ನು ತಿನ್ನುವುದರಿಂದ ಮಧುಮೇಹವನ್ನು ಕಡಿಮೆ ಮಾಡಬಹುದು.
ಕೂದಲು ಮತ್ತು ಚರ್ಮಕ್ಕಾಗಿ
ನೆನೆಸಿದ ಬಾದಾಮಿಯಲ್ಲಿ ವಿಟಮಿನ್ E ಇರುವುದರಿಂದ ಚರ್ಮವನ್ನು ಹೊಳೆಯುವಂತೆ ಮಾಡುವುದರೊಂದಿಗೆ ಸುಕ್ಕುಗಳಿಂದ ದೂರವಿರಿಸಲು ಸಹಕರಿಸುತ್ತದೆ. ತ್ವಚೆಯ ಹೊರತಾಗಿ, ನೆನಸಿದ ಬಾದಾಮಿ ತಿನ್ನುವುದರಿಂದ ಕೂದಲು ಕಪ್ಪುಯಾಗಿರುವುದರೊಂದಿಗೆ, ದಪ್ಪವಾಗಿ ಮತ್ತು ಬಲವಾಗಿರುವಂತೆ ಮಾಡುತ್ತದೆ.