ಚಾಮರಾಜನಗರ : ಕೆಎಸ್ಆರ್ಟಿಸಿ ಬಸ್ಸಿನಿಂದ ತಲೆಯನ್ನು ಹೊರ ಹಾಕಿದ್ದ ಮಹಿಳೆಯ ರುಂಡ ಪೀಸ್ ಪೀಸ್ ಆಗಿರುವ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದ 50 ವರ್ಷದ ಶಿವಲಿಂಗಮ್ಮ ಮೃತ ಮಹಿಳೆ.
ಶಿವಲಿಂಗಮ್ಮ ಹಾಲಹಳ್ಳಿ ಗ್ರಾಮದಿಂದ ಪ್ರಯಾಣಿಸುವಾಗ ನಂಜನಗೂಡು ತಾಲೂಕು ಮುದ್ದೇನಹಳ್ಳಿ ಸಮೀಪ ಬಸ್ಸಿನ ಕಿಟಕಿಯಿಂದ ತಲೆ ಹೊರಹಾಕಿದ್ದಾಗ ಈಚರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಮೃತ ಮಹಿಳೆಯ ತಲೆ ಪೀಸ್ ಪೀಸ್ ಆಗಿರುವ ಭಯಾನಕ ದೃಶ್ಯ ಸಾಮಾಜಿ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಇದಲ್ಲದೆ ಮಹಿಳೆಯ ಪಕ್ಕ ಕುಳಿತಿದ್ದ ಮತ್ತೊಬ್ಬ ಮಹಿಳೆಯ ಕೈ ಕೂಡ ಕಟ್ಟಾಗಿದ್ದು, ಈ ದೃಶ್ಯ ನೋಡಿದ ಹುಡುಗಿಯೊಬ್ಬಳು ಪ್ರಜೆ ತಪ್ಪಿ ತಪ್ಪಿದ ಘಟನೆ ನಡೆದಿದೆ.