ವಿಜಯನಗರ:- ದೇಶ, ರಾಜ್ಯದಲ್ಲಿ ಇಂದು 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರುಗಳು ಧ್ವಜಾರೋಹಣ ನೆರವೇರಿಸಿದ್ದಾರೆ.
IPL2025: RCBಗೆ ಶುರುವಾಯ್ತು ಹೊಸ ಚಿಂತೆ: ಸಾಲ್ಟ್-ಸ್ಟೋನ್ ಸಪ್ಪೆ-ಸಪ್ಪೆ! Uff ಮುಂದೇನು?
ಆದರೆ, ವಿಜಯನಗರದಲ್ಲಿರುವ ದೇಶದ 2ನೇ ಅತಿ ದೊಡ್ಡ ಧ್ವಜಸ್ತಂಭದಿಂದ ತ್ರಿವರ್ಣ ಧ್ವಜ ಕುಸಿದು ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಈ ಧ್ವಜವನ್ನು ಸಾಂಕೇತಿಕವಾಗಿ ಏರಿಸಿ ವೇದಿಕೆಗೆ ಬಂದು ಸಂಪ್ರದಾಯಿಕ ಧ್ವಜಾರೋಹಣ ನೆರವೇರಿಸಿದ್ದರು. ನಂತರ ಪರೇಡ್ ನಡೆಯುತ್ತಿದ್ದಾಗ ತ್ರಿವರ್ಣ ಧ್ವಜ ಕುಸಿದು ಬಿತ್ತು. ಅದೃಷ್ಟವಶಾತ್ ಆ ವೇಳೆ ಕೆಳಗೆ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿತು.
ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ದೇಶದ ಅತೀ ಎತ್ತರದ ಎರಡನೇ ಅತಿದೊಡ್ಡ ರಾಷ್ಟ್ರಧ್ವಜ ಇದ್ದು, ಇಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಧ್ವಜಾರೋಹಣ ಮಾಡಿದ್ದಾರೆ. ಧ್ವಜಾರೋಹಣ ಮಾಡಿದ ಬಳಿಕ ರಾಷ್ಟ್ರಧ್ವಜವು ಮೇಲೆರುತ್ತಿರುವಾಗ ವೈರ್ ಗಳು ಕಟ್ ಆಗಿ ಕೆಳಗೆ ಬಿದ್ದವೆ. 408 ಅಡಿ ಎತ್ತರದ ಧ್ವಜ ಸ್ತಂಭದಿಂದ ರಾಷ್ಟ್ರಧ್ವಜ ಹರಿದುಬಿದ್ದಿದೆ.