ಹರಿಯಾಣ:- ಪಂಜಾಬ್ನ ಚಂಡೀಗಢದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಗಂಡ ತನ್ನ ಹೆಂಡತಿಯಿಂದ ವಿಚ್ಛೇದನ ಬಯಸಿದ್ದಾನೆ. ಆದರೆ ಹೆಂಡತಿಗೆ ಅವನನ್ನು ಬಿಡಲು ಇಷ್ಟವಿರಲಿಲ್ಲ. ಅವರ ಜಗಳಕ್ಕೆ ಕಾರಣ ಚಹಾ. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ ಪತಿಯ ಅರ್ಜಿ ತಿರಸ್ಕೃತವಾಯಿತು.
ಲವ್ ಜಿಹಾದ್ ತಡೆಗೆ ಸಹಾಯವಾಣಿ… ಶ್ರೀರಾಮಸೇನೆಗೆ ಬಂತು ನೂರಾರು ಕರೆಗಳು!
ಪಂಜಾಬ್-ಹರಿಯಾಣ ಹೈಕೋರ್ಟ್ ಮುಂದೆ ವಿಚ್ಛೇದನದ ವಿಶಿಷ್ಟ ಪ್ರಕರಣವೊಂದು ಬಂದಿದೆ. ತನ್ನ ಹೆಂಡತಿ ಟೀ ಮಾಡುವುದಿಲ್ಲ ಎಂದು ಪತಿ ವಿಚ್ಛೇದನ ಕೋರಿದ್ದಾರೆ. ಈ ಕುರಿತು ಪತ್ನಿಯ ಮಾತನ್ನೂ ಹೈಕೋರ್ಟ್ ಆಲಿಸಿದೆ. ಆಗ ಗಂಡನಿಗೆ ಶಾಕ್ ಆಗುವಂಥ ತೀರ್ಪನ್ನು ಹೈಕೋರ್ಟ್ ಕೊಟ್ಟಿದೆ.
ಅವರ ಮನೆಗೆ ಸಂಬಂಧಿಕರು ಅಥವಾ ಸ್ನೇಹಿತರು ಬಂದಾಗಲೆಲ್ಲಾ ಅವರ ಹೆಂಡತಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಪತಿ ಹೇಳಿದ್ದಾರೆ. ಅವರಿಗೆ ತಿಂಡಿ ಮಾಡಿಕೊಡುವುದನ್ನು ಮರೆತುಬಿಡಿ, ಚಹಾವನ್ನು ಸಹ ಕೇಳುವುದಿಲ್ಲ. ಈ ಕಾರಣದಿಂದಾಗಿ, ಅವರ ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧವು ಹದಗೆಟ್ಟಿದೆ. ನಮ್ಮ ಮನೆಗೆ ಯಾರೂ ಬರುವುದಿಲ್ಲ ಎಂದಿದ್ದಾರೆ. ಮೊದಲಿಗೆ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ವಿಷಯ ಕೈಗೂಡದೇ ಇದ್ದಾಗ ಅವರು ಪಂಜಾಬ್ ಹರ್ಯಾಣ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇಲ್ಲಿಯೂ ಆತನಿಗೆ ನಿರಾಸೆಯಾಯಿತು. ಇಂತಹ ಸಣ್ಣ ವಿಚಾರಕ್ಕೆ ನಾವು ವಿಚ್ಛೇದನ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಪತಿ ಮಾಡುವ ಎಲ್ಲ ಆರೋಪಗಳು ಸುಳ್ಳು ಎಂದು ಪತ್ನಿ ಹೇಳಿದ್ದಾರೆ. ನಾನು ಆ ರೀತಿಯಾಗಿ ಎಂದೂ ನಡೆದುಕೊಂಡಿಲ್ಲ. ಇತ್ತೀಚೆಗೆ ಗಂಡನ ವರ್ತನೆ ಬದಲಾಗಿದೆ. ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುತ್ತಲೇ ಇರುತ್ತಾನೆ. ಆದರೂ ನನಗೆ ಅವನನ್ನು ಬಿಡಲು ಇಷ್ಟವಿಲ್ಲ. ಗಂಡನ ಈ ವರ್ತನೆಯಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಆಕೆ ಹೇಳಿದ್ದಾರೆ.
ಇನ್ನು ಮುಂದೆ ಒಂದೇ ಸೂರಿನಡಿ ಪತ್ನಿಯೊಂದಿಗೆ ಇರಲು ಸಾಧ್ಯವಿಲ್ಲ ಎಂದು ಪತಿ ಅರ್ಜಿಯಲ್ಲಿ ತಿಳಿಸಿದ್ದರು. ಆದರೆ, ಪತಿಯ ವಾದಗಳನ್ನು ಹೈಕೋರ್ಟ್ ಒಪ್ಪಿಲ್ಲ. ಇಂತಹ ಸಣ್ಣ ವಿಚಾರಕ್ಕೆ ನಾವು ಈ ವಿಚ್ಛೇದನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.