ವಿಜಯಪುರ:– ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ವ್ಯವಸ್ಥಿತವಾಗಿ ತಯಾರಿ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
Rama Navami 2024: ರಾಮ ನವಮಿ ಯಾವಾಗ.? ಪೂಜಾ ವಿಧಿ ವಿಧಾನ, ಮಹತ್ವ ತಿಳಿಯಿರಿ
ವಿಜಯಪುರದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಮುಗಿದ 15 ದಿನಗಳಲ್ಲಿ ಕಾಂಗ್ರೆಸ್ (Congress) ಒಡೆದು ಹೋಗುತ್ತೆ, ಹೊಸ ಸರ್ಕಾರ ರಚನೆಯಾಗುತ್ತೆ ಅಂತ ಯತ್ನಾಳ್ ಹೇಳಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ ತಾವು ಸಿಎಂ ಆಗುವ ಪ್ಲಾನ್ ಹಾಕಿದ್ದಾರೆ ಅಂತಲೂ ಯತ್ನಾಳ್ ಹೇಳಿದ್ದಾರೆ.
ಈ ಬಾರಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಲೋಕಸಭೆ ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆಶಿ ಸಿಎಂ ಆಗುವ ಪ್ಲಾನ್ ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ. ಚುನಾವಣೆ ಬಳಿಕ ಕಾಂಗ್ರೆಸ್ ಒಡೆದು ಹೋಗುತ್ತೆ, ಹೊಸ ಸರ್ಕಾರ ರಚನೆಯಾಗುತ್ತೆ ಅಂತಲೂ ಯತ್ನಾಳ್ ಹೇಳಿದ್ದಾರೆ
ಇನ್ನು ಸಿದ್ದರಾಮಯ್ಯ ಇಳಿಸೋಕೆ ಹೋದ್ರೆ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಅಂತ ಯತ್ನಾಳ್ ಹೇಳಿದ್ದಾರೆ. ಎಂದು ಹೊಸ ಬಾಂಬ್ ಹಾಕಿದ ಯತ್ನಾಳ್, ಡಿಕೆಶಿ ಈಗಲೇ ತನ್ನ ಪರವಾಗಿರುವ ಲೋಕಸಭಾ ಸದಸ್ಯರ ಆಯ್ಕೆಗೆ ಸ್ಕೆಚ್ ಹಾಕಿದ್ದಾರೆ. ಚುನಾವಣೆ ಮುಗಿದ ಬಳಿಕ ಡಿಕೆಶಿ ಸಿಎಂ ಆಗುವ ಕನಸು ಕಾಣ್ತಿದ್ದಾರೆ ಅಂತ ಯತ್ನಾಳ್ ಹೇಳಿದ್ದಾರೆ.
ಇದs ಕಾರಣಕ್ಕೆ ಬಾಗಲಕೋಟೆಯಲ್ಲಿ ಒಕ್ಕಲಿಗರು, ಲಿಂಗಾಯತರು ಒಂದೇ ಎನ್ನುವ ಸಂದೇಶವನ್ನು ಡಿಕೆಶಿ ಕೊಟ್ಟಿದ್ದಾರೆ. ಸಚಿವ ಶಿವಾನಂದ ಪಾಟೀಲ್ ಮಗಳನ್ನು ಗೆಲ್ಲಿಸಿಕೊಟ್ಟರೆ ಶಿವಾನಂದ ಪಾಟೀಲ್ನನ್ನ ಜೊತೆಗಿರ್ತಾರೆ. ಸಿದ್ದರಾಮಯ್ಯರನ್ನ ಇಳಿಸೋಕೆ ಕಾರ್ಯತಂತ್ರ ಮಾಡಿದ್ದೇವೆ ಎನ್ನುವ ಸಂದೇಶವನ್ನ ಡಿಕೆಶಿ ಕೊಟ್ಟಿದ್ದಾರೆ ಅಂತ ಯತ್ನಾಳ್ ಆರೋಪಿಸಿದ್ದಾರೆ.
ಮುಂದೆ ಕಾಂಗ್ರೆಸ್ ಒಡೆದು ಮುಂದೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತೆ. ಹೀಗಾಗಿ ಸಿದ್ದರಾಮಯ್ಯ ಅವರು ಡಿಕೆಶಿ ಪರವಾಗಿರುವ ಅಭ್ಯರ್ಥಿಗಳನ್ನು ಸೋಲಿಸಬೇಕು ಅಂತ ಯತ್ನಾಳ್ ಹೇಳಿದ್ದಾರೆ. ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ಮಾಡದೆ ಹೋದರೆ ಅವರ ಸಿಎಂ ಸ್ಥಾನ ಹೋಗೋದು ಗ್ಯಾರಂಟಿ ಅಂತ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಇನ್ನು ವಚನಾನಂದ ಸ್ವಾಮಿ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ರು. ವಚನಾನಂದ ಸ್ವಾಮೀಜಿ ಕಾಂಗ್ರೆಸ್ಗೆ ಬುಕ್ ಆಗಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದಾರೆ ವಚನಾನಂದ ಸ್ವಾಮೀಜಿ ಎಷ್ಟು ಹಣ ಒಯ್ದಿದ್ದಾರೆ, ಎಷ್ಟು ದುರುಪಯೋಗ ಮಾಡಿಕೊಂಡಿದ್ದಾರೆ ಹೇಳಲಿ ಅಂತ ಸವಲು ಹಾಕಿದ್ದಾರೆ.
ಬೊಮ್ಮಾಯಿ ಹೆಲಿಕಾಪ್ಟರ್ನಲ್ಲಿ ವಚನಾನಂದ ಸ್ವಾಮೀಜಿ ಅಡ್ಡಾಡ್ತಿದ್ದರು. ಬಿಜೆಪಿ ಸರ್ಕಾರ ಹತ್ತಾರು ಕೋಟಿ ಕೊಟ್ಟಿದೆ. ಈಗ ಬಿಜೆಪಿ ವಿರುದ್ಧ ಅವರು ಮಾತನಾಡ್ತಿದ್ದಾರೆ. ಅಂದರೆ ಅವರು ಕಾಂಗ್ರೆಸ್ಗೆ ಬುಕ್ ಆಗಿದ್ದಾರೆ. ವಚನಾನಂದ ಬುಕ್ಕಿಂಗ್ ಗಿರಾಕಿ, ಪರಮಪೂಜ್ಯ ಬುಕ್ಕಿಂಗ್ ಮಹಾಸ್ವಾಮಿಗಳು ಎಂದು ಯತ್ನಾಳ್ ವ್ಯಂಗ್ಯವಾಡಿದ್ರು.