ಬೆಂಗಳೂರು:- ಕ್ಷುಲ್ಲಕ ಕಾರಣಕ್ಕೆ ಹೆತ್ತ ತಾಯಿ ಹಾಗೂ ತಮ್ಮನ ಕಣ್ಮುಂದೆಯೇ ಪಾಪಿ ಮಗ ತನ್ನ ತಂದೆಯನ್ನೇ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ಮನೆ ಅಂಗಳಕ್ಕೆ ಕರಿ ಚಿರತೆ ಎಂಟ್ರಿ: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ!
76 ವರ್ಷದ ವೇಲಾಯುಧನ್ ಇಳಿವಯಸ್ಸಿನಲ್ಲಿ ನೆರಳಾಗಬೇಕಿದ್ದ ಮಗನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾನೆ. ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮಗ ವಿನೋದ್ ಕುಮಾರ್ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಮೂಲತಃ ಕೇರಳದ ಏರಿಮಲೈ ವಾಸಿಯಾದ ಈತ ಬೆಂಗಳೂರಿನ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ಕುಟುಂಬದೊಂದಿಗೆ ನೆಲೆಸಿತ್ತು ಎಂದು ತಿಳಿದು ಬಂದಿದೆ.
ತಮ್ಮ ವಿಫುಲ್ ಕುಮಾರ್ಗೆ 300 ರೂಪಾಯಿ ಹಣ ನೀಡಿ ಎಣ್ಣೆ ತರಿಸಿದ ವಿನೋದ್, ಎಂದಿನಂತೆ ತಂದೆಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದಾನೆ. ಬರಿ ಚಡ್ಡಿ ಧರಿಸಿ ಓಡಾಡುತ್ತಿರುವುದನ್ನು ಕಂಡು ಪಂಚೆ ಉಟ್ಟುಕೊಳ್ಳುವಂತೆ ಹೇಳಿದಕ್ಕೆ ವ್ಯಾಘ್ರಗೊಂಡ ಮಗ ವಿನೋದ್, ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ. ಗೋಡೆಗೆ ತಲೆಯನ್ನು ಗುದ್ದಿ ಕೆಳಗೆ ಬೀಳಿಸಿದ್ದಾನೆ. ಅಷ್ಟಕ್ಕೇ ಬಿಡದೆ ಕಾಲಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಾನೆ.
ಇನ್ನು ಆರೋಪಿ ವಿನೋದ್ ಕುಮಾರ್ ಕುಡಿತದ ಚಟಕ್ಕೆ ದಾಸನಾಗಿದ್ದು, ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನು. ಈ ಹಿಂದೆ ಕೂಡ ತಂದೆ ವೇಲಾಯುಧನ್ ಮತ್ತು ತಮ್ಮ ವಿಫುಲ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದು, ರಕ್ತ ಗಾಯಗಳಾಗಿತ್ತು. ಕೆಲಸಕ್ಕೆ ಹೋಗದೆ ಸದಾ ಮನೆಯಲ್ಲಿಯೇ ಇರುತ್ತಿದ್ದ ವಿನೋದ್, ತಂದೆ ಪೆನ್ಷನ್ ಹಣವನ್ನು ಬೆದರಿಸಿ ಕಸಿಯುತ್ತಿದ್ದನು. ತಾಯಿ ಕ್ಯಾನ್ಸರ್ ರೋಗಿ, ತಮ್ಮ ಮಾನಸಿಕವಾಗಿ ದುರ್ಬಲನಾಗಿದ್ದು, ತಂದೆಯ ಪೆನ್ಷನ್ ಹಣದಿಂದ ಹೇಗೋ ಸಂಸಾರ ಸಾಗುತ್ತಿತ್ತು. ಆದ್ರೆ, ಈಗ ಮನೆಗೆ ಅಧಾರವಾಗಿದ್ದ ತಂದೆ ಸಾವನ್ನಪ್ಪಿದ್ದು, ಮಗ ಜೈಲು ಸೇರಿದ್ದಾನೆ. ಕ್ಯಾನ್ಸರ್ ಪೀಡಿತ ತಾಯಿಯನ್ನು ಮಾನಸಿಕವಾಗಿ ದುರ್ಬಲನಾಗಿರುವ ಮಗ ನೋಡಿಕೊಳ್ಳಬೇಕಿದೆ.