ಕನ್ನಡಿಗ ಮನೀಶ್ ಪಾಂಡೆ ವೈವಾಹಿಕ ಜೀವನದಲ್ಲಿ ವೈಮನಸ್ಯ ಮೂಡಿದೆ. ನಟಿ ಆಶ್ರಿತಾ ಜೊತೆಗಿನ ಐದು ವರ್ಷಗಳ ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಜೈಲು ಸೇರಿದ ಎರಡೇ ದಿನಕ್ಕೆ ಡಿ ಗ್ಯಾಂಗ್ ಗೆ ಸಿಕ್ತು ಭರ್ಜರಿ ಮಟನ್ ಊಟ..!
2019 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಯ ನಡುವೆ ವೈಮನಸ್ಸು ಮೂಡಿದ್ದು, ಹೀಗಾಗಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿಯನ್ನು ಪುಷ್ಠೀಕರಿಸುವಂತೆ ಕರ್ನಾಟಕದ ಕ್ರಿಕೆಟಿಗ ಮನೀಶ್ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಪತ್ನಿಯ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅತ್ತ ಆಶ್ರಿತಾ ಶೆಟ್ಟಿ ಕೂಡ ಪತಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಖಾತೆಯಿಂದ ಅಳಿಸಿ ಹಾಕಿದ್ದಾರೆ.
ಐದು ವರ್ಷಗಳ ಹಿಂದೆ ಮನೀಶ್ ಪಾಂಡೆ ನಟಿ ಆಶ್ರಿತಾ ಶೆಟ್ಟಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಕಳೆದ ವರ್ಷದವರೆಗೂ ಅನೋನ್ಯವಾಗಿದ್ದ ದಂಪತಿ ಇದೀಗ ದೂರವಾಗಲು ನಿರ್ಧರಿಸುವ ಸುದ್ದಿಗೆ ಅಭಿಮಾನಿಗಳು ಅಚ್ಚರಿ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.