ಕಾನ್ಪುರ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಿ20 ಕ್ರಿಕೆಟ್ನಂತೆ ಬ್ಯಾಟ್ ಬೀಸಿದ ಪರಿಣಾಮ ಭಾರತ ತಂಡ ಎರಡು ವಿಶ್ವದಾಖಲೆ ನಿರ್ಮಿಸಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗದ 50 ರನ್ (19 ಎಸೆತ) ಮತ್ತು ಅತಿ ವೇಗದ 100 ರನ್ (61 ಎಸೆತ) ಭಾರತ ಹೊಡೆದಿದೆ. ಮೊದಲ 50 ರನ್ ಪೈಕಿ ಜೈಸ್ವಾಲ್ 30 ರನ್, ರೋಹಿತ್ ಶರ್ಮಾ 19 ರನ್ ಮತ್ತು ಎರಡು ಇತರೇ ರನ್ ಬಂದಿತ್ತು.
ಈ ಜುಲೈನಲ್ಲಿ ಇಂಗ್ಲೆಂಡ್ ವಿಂಡೀಸ್ ವಿರುದ್ಧ 26 ಎಸೆತಗಳಲ್ಲಿ 50 ರನ್ ಹೊಡೆದಿತ್ತು. ವೇಗದ 100 ರನ್ ಹೊಡೆದ ದಾಖಲೆ ಈ ಮೊದಲು ಭಾರತದ ಹೆಸರಿನಲ್ಲೇ ಇತ್ತು. 2023 ರಲ್ಲಿ ವಿಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 74 ಎಸೆತಗಳಲ್ಲಿ 100 ರನ್ ಹೊಡೆದಿತ್ತು. ಇನ್ನಿಂಗ್ಸ್ ಮೊದಲ ಓವರ್ನಲ್ಲಿ ಯಶಸ್ವಿ ಜೈಸ್ವಾಲ್ ಹ್ಯಾಟ್ರಿಕ್ ಬೌಂಡರಿ ಹೊಡೆದಿದ್ದರು. ರೋಹಿತ್ ಶರ್ಮಾ ತಾನು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದ್ದರು.
ನಿಮಗೆ ಗೊತ್ತೆ..? ಇದೇ ಕಾರಣಕ್ಕೆ ಮಹಿಳೆಯರಲ್ಲಿ “ಸೆಕ್ಸ್” ವೇಳೆ ನೋವು ಕಾಣಿಸಿಕೊಳ್ಳುವುದು!
ರೋಹಿತ್ ಶರ್ಮಾ 23 ರನ್(11 ಎಸೆತ, 1 ಬೌಂಡರಿ, 3 ಸಿಕ್ಸ್), ಯಶಸ್ವಿ ಜೈಸ್ವಾಲ್ 72 ರನ್ ( 21 ಎಸೆತ, 12 ಬೌಂಡರಿ, 2 ಸಿಕ್ಸರ್) , ಶುಭಮನ್ ಗಿಲ್ 39 ರನ್ (36 ಎಸೆತ, 4 ಬೌಂಡರಿ, 1 ಸಿಕ್ಸರ್), ರಿಷಭ್ ಪಂತ್ 9 ರನ್ ಗಳಿಸಿ ಔಟಾದರು. 21 ಓವರ್ ಮುಕ್ತಾಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿದೆ. ಕೊಹ್ಲಿ 20 ರನ್ ಗಳಿಸಿದರೆ ರಾಹುಲ್ 13 ರನ್ ಹೊಡೆದು ಕ್ರೀಸ್ನಲ್ಲಿ ಆಡುತ್ತಿದ್ದಾರೆ.
ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದ್ದ ಬಾಂಗ್ಲಾದೇಶ ಇಂದು 74.2 ಓವರ್ಗಳಲ್ಲಿ 233 ರನ್ ಗಳಿಗೆ ಆಲೌಟ್ ಆಯ್ತು. ಮೊಮಿನುಲ್ ಹಕ್ 107 ರನ್ಗಳಿಸಿ ಅಜೇಯರಾಗಿ ಉಳಿದರು. ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಅಶ್ವಿನ್, ಅಕಾಶ್ ದೀಪ್ ತಲಾ 2 ವಿಕೆಟ್ ಪಡೆದರೆ ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.