ಚಿಕ್ಕಬಳ್ಳಾಪುರ: ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸರು ರಕ್ಷಿಸಿ ಮಾನವಿಯತೆ ಮೇರೆದಿದ್ದಾರೆ. ಹೌದು ಇಂತಹ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ, ತಾಲೂಕಿನ ಎಲ್ಲೋಡು ಗ್ರಾಮದ ಮಹಿಳೆ ಕಳೆದ ಹಲವು ದಿನಗಳ ಹಿಂದೆ ಅದೇ ಗ್ರಾಮದ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಆಗಿ, ಬಾಗೇಪಲ್ಲಿ ಪಟ್ಟಣದಲ್ಲಿ ವಾಸವಿದ್ದು,
ಇತ್ತಿಚಿಗೆ ತನ್ನ ಗಂಡನಿಗೆ ಅಪಘಾತವಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೋಷಕರ ವಿರೋಧದ ನಡುವೆಯಲ್ಲೂ ವಿವಾಹವಾದ ದಂಪತಿ ಕಷ್ಟಗಳನ್ನೆ ಎದುರಿಸಿಕೊಂಡು ಬರುತ್ತಿದ್ದೆನೆ, ಜತೆಗೆ ತನ್ನ ಅಕ್ಕ ಸಹ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ಅ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅ ವಿಡಿಯೋವನ್ನು ನೋಡಿದ ಗುಡಿಬಂಡೆ ಪೊಲೀಸರಾದ ದಕ್ಷಿಣ ಮೂರ್ತಿ ಮತ್ತು ಮುರಳಿ ರವರು ಮಹಿಳೆ ಬಳಸುತ್ತಿದ್ದ ಮೊಬೈಲ್ ಲೊಕೇಷನ್ ಬಳಸಿಕೊಂಡು ಮಹಿಳೆಯನ್ನು ಗುಡಿಬಂಡೆ ಕೆರೆಯ ಬಳಿ ಪತ್ತೆ ಅಚ್ಚಿದ್ದಾರೆ,
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಇನ್ನು ಮಹಿಳೆ ಸ್ಲೀಪಿಂಗ್ ಮಾತ್ರೆ ಸೇವಿಸಿದ್ದು, ಗುಡಿಬಂಡೆ ಪೊಲೀಸರು ಕೂಡಲೇ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಮಹಿಳೆ ಪ್ರಾಣ ರಕ್ಷಸಿದ್ದಾರೆ. ಒಟ್ಟಾರೆ ಮಹಿಳೆಯ ವಿಡಿಯೋ ನೋಡಿ ಕೆಲವೇ ಗಂಟೆಗಳಲ್ಲಿ ಮಹಿಳೆಯನ್ನು ಪತ್ತೆ ಅಚ್ಚಿ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರಿಗೆ ಗುಡಿಬಂಡೆ ಜನತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.