ಕೇವಲ ಸರ್ಕಾರಿ ಉದ್ಯೋಗ, ಸಾಫ್ಟ್ವೇರ್ ಉದ್ಯೋಗದಿಂದ ಮಾತ್ರ ಒಳ್ಳೆಯ ಸಂಪಾದನೆ ಪಡೆಯಬಹುದು ಎಂದು ಕೆಲವರು ನಂಬುತ್ತಾರೆ. ಆದರೆ ಕೃಷಿಯ ಮೂಲಕವೂ ಸಾಧಿಸಬಹುದು. ಅದಕ್ಕೆ ಬೇಕಾಗಿರುವುದು ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಎಂಬುದನ್ನ ಅಮೇಥಿಯ ರೈತ ಅಜಯ್ ವರ್ಮಾ ಇದನ್ನು ಸಾಬೀತುಪಡಿಸಿದ್ದಾರೆ.
ರೈತ ಅಜಯ್ ವರ್ಮಾ ಅವರ ಕುಟುಂಬಕ್ಕೆ ಪ್ರತಿ ಒಂದೊಂದು ರೂಪಾಯಿಗೂ ಕಷ್ಟಪಟ್ಟ ದಿನಗಳಿವೆ. ಆದರೆ, ಇಂದು ತರಕಾರಿ ಕೃಷಿ ಅವರ ಕೈ ಹಿಡಿದಿದೆ. ಕೃಷಿ ಅಧ್ಯಯನ ಮಾಡಿದ ನಂತರ, ಅಜಯ್ಗೆ ಉದ್ಯೋಗ ಸಿಗಲಿಲ್ಲ, ಆದ್ದರಿಂದ ಅವರು ಕೃಷಿಯನ್ನೇ ತನ್ನ ಸ್ವಂತ ಉದ್ಯೋಗವನ್ನಾಗಿ ಮಾಡಿಕೊಂಡರು.
ರೈತ ಅಜಯ್ ವರ್ಮಾ ಅಮೇಥಿ ಜಿಲ್ಲೆಯ ಸಂಗ್ರಾಮಪುರ ಅಭಿವೃದ್ಧಿ ಬ್ಲಾಕ್ನ ಪುನ್ನಾಪುರ ಗ್ರಾಮದ ನಿವಾಸಿ. ಅಜಯ್ ವರ್ಮಾ ಅವರು ಸ್ನಾತಕೋತ್ತರ ಪದವಿವರೆಗೆ ಕೃಷಿ ಅಧ್ಯಯನ ಮಾಡಿದ್ದಾರೆ. ಆ ನಂತರವೂ ಕೆಲಸ ಸಿಗದ ಕಾರಣ ಸ್ವಯಂ ಉದ್ಯೋಗ ಮಾಡುವ ನಿರ್ಧಾರಕ್ಕೆ ಬಂದಿದ್ದು, ವಿವಿಧ ತರಕಾರಿಗಳನ್ನು ಬೆಳೆದು ಕೈತುಂಬಾ ಸಂಪಾದಿಸುತ್ತಿದ್ದಾರೆ. ಅಜಯ್ ವರ್ಮಾ ವಿವಿಧ ಕಾಲಕ್ಕೆ ತಕ್ಕ ತರಕಾರಿಗಳನ್ನು ಸಾವಯವ ವಿಧಾನದ ಮೂಲಕ ಬೆಳೆಸುತ್ತಾರೆ.
ಸದ್ಯ ರೈತ ಅಜಯ್ ವರ್ಮಾ ಅವರು ಕ್ಯಾರೆಟ್, ಟೊಮೆಟೊ, ಎಲೆಕೋಸು, ಮೆಣಸಿನಕಾಯಿ, ಈರುಳ್ಳಿ ಬೆಳೆಯುತ್ತಿದ್ದಾರೆ. ಅಜಯ್ ಈ ತರಕಾರಿಗಳನ್ನು ಸುಮಾರು 9 ಎಕರೆಗಳಲ್ಲಿ ತರಕಾರಿ ಬೆಳೆದು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ಪ್ರತಿದಿನವೂ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.