ಹುಬ್ಬಳ್ಳಿ :ಭಾರಿ ಮಳೆಯಿಂದ ಮನೆ ಗೋಡೆ ಸಂಪೂರ್ಣ ಹಾನಿ ಆಗಿದ್ದು ಪರಿಹಾರಕ್ಕೆ ಸಂತ್ರಸ್ತರು ಮನವಿ ಮಾಡಿದ್ದಾರೆ.
ಇದು ಕಲಘಟಗಿ ಪಟ್ಟಣದ ನಾಲಗಾರ ಓಣಿಯ ನಿವಾಸಿಯಾದ ನಜಬುನ್ನಿಸಾ ಮಹಮದ್ ಗೌಸ್ ಉದೇಕಾರ್ ಮನೆ ಆಗಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದೆ.
ಕುಟುಂಬದ ಜೀವನ ಸಂಕಷ್ಟಕ್ಕೆ ಸಿಲುಕಿದೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಬೇಕೆಂದು ಕುಟುಂಬದವರು ಮನವಿ ಮಾಡಿಕೊಂಡರು.
ಘಟನೆಯ ಕುರಿತು ಕಲಘಟಗಿ ಗ್ರಾಮ ಆಡಳಿತ ಅಧಿಕಾರಿಗಳಾದ ಕುಮಾರ್ ಮುದುಕಣ್ಣವರ್ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.