ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡ್ಬೇಕು ಅನ್ನೋ ಆಸೆ ಬಹುತೇಕ ನಟಿಯರಿಗೆ ಇದ್ದೇ ಇರುತ್ತೆ. ಈತನ ಜೊತೆ ಒಂದೇ ಒಂದು ಸಿನಿಮಾ ಮಾಡಿದ್ರು ಸಾಕು ಆ ನಟಿ ಸ್ಟಾರ್ ಆಗಿ ಬಿಡ್ತಾರೆ.
ಆದರೆ ದರ್ಶನ್ ಒಬ್ಬ ನಟಿಯ ಜೊತೆ ಒಂದೇ ಒಂದು ಭಾರಿ ನಟಿಸೋದು. ಮತ್ತೊಂದು ಸಿನಿಮಾ ಮಾಡ್ಬೇಕು ಅಂದರೆ ಆಕೆ ಬೇರೆಯೇ ನಟಿಯಾಗಿರ್ಬೇಕು. ಆದರೆ ನಟಿ ನಿಖಿತಾ ತುಕ್ರಾಲ್ ಮಾತ್ರ ಬ್ಯಾಕ್ ಟು ಬ್ಯಾಕ್ ದರ್ಶನ್ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಘಳಿಸಿದರು.
ನಿಕಿತಾ ತುಕ್ರಾಲ್ ಅವರು ದರ್ಶನ್ಗೆ ಜೋಡಿಯಾಗಿ ನಟಿಸಿದ ಸಿನಿಮಾ ಹಿಟ್ ಆಯಿತು. ಅಷ್ಟೇ ಅಲ್ಲದೆ ಮತ್ತೆ ಮತ್ತೆ ದರ್ಶನ್ ಜೊತೆ ನಟಿಸೋ ಅವಕಾಶ ಅವರಿಗೆ ಸಿಕ್ಕಿತು. ಇದರಿಂದ ನಿಕಿತಾ ಹಾಗೂ ದರ್ಶನ್ ಜೋಡಿ ಬೇಗನೆ ಬೆಳ್ಳಿ ತೆರೆಯ ಮೇಲೆ ಫೇಮಸ್ ಆಗಿ ಪ್ರೇಕ್ಷಕರ ಮನ ಗೆದ್ದಿದ್ದರು.
ನಿಕಿತಾ ತುಕ್ರಾಲ್ ಹಾಗೂ ದರ್ಶನ್ ಜೋಡಿಯಾಗಿ ಯೋಧ, ಪ್ರಿನ್ಸ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸ್ನೇಹಿತರು ಸೇರಿದಂತೆ ಒಟ್ಟು ನಾಲ್ಕು ಸಿನಿಮಾಗಳಲ್ಲಿ ನಟಿಸಿದರು. ಈ ಮೂಲಕ ದರ್ಶನ್ ಜೊತೆ ನಟಿಸಲು ನಾಲ್ಕ ಸಲ ಅವಕಾಶ ಪಡೆದ ನಟಿ ಎನಿಸಿಕೊಂಡರು.
ಆದರೆ ದರ್ಶನ್ ಜೊತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದ ಮೇಲೆ ನಿಕಿತಾ ತುಕ್ರಾಲ್ಗೆ ಸಮಸ್ಯೆ ಶುರುವಾಗಿತ್ತು. ಇದೇ ವೇಳೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಮಧ್ಯೆ ಸಮಸ್ಯೆ ಶುರುವಾಗಿತ್ತು. ಇವರ ಕೌಟುಂಬಿಕ ಸಮಸ್ಯೆಗೆ ನಿಕಿತಾ ತುಕ್ರಾಲ್ ಅವರೇ ಕಾರಣ ಎನ್ನುವ ಸುದ್ದಿ ಅಂದು ಎಲ್ಲಾ ಕಡೆ ಚರ್ಚೆ ಆಯಿತು.
ದರ್ಶನ್ ಪತ್ನಿ ವಿಜಲಕ್ಷ್ಮಿ ಮೇಲೆ ಹಲ್ಲೆ ಮಾಡಿದಾಗ ಅವರ ಕುಟುಂಬದ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಯಾಗಿತ್ತು. ಆಗ ವಿಜಯಲಕ್ಷ್ಮಿ ಇದಕ್ಕೆಲ್ಲಾ ನಿಖಿತಾರೆ ಕಾರಣ ಎಂದಿದ್ದರು. ಬಳಿಕ ನಿಖಿತಾರನ್ನು ಕನ್ನಡ ಚಿತ್ರರಂಗದಿಂದ ಮೂರು ವರ್ಷಗಳ ಕಾಲ ನಿಷೇದ ಮಾಡಲಾಗಿತ್ತು.
ಆದರೆ ದರ್ಶನ್ ಕುಟುಂಬದಲ್ಲಿ ನಡೆದಿದ್ದಕ್ಕೂ ತನಗೂ ಸಂಬಂಧ ಇಲ್ಲ ಎಂದಿದ್ದರು ನಿಕಿತಾ. ತನ್ನನ್ನು ಸುಮ್ಮನೆ ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ ಎಂದಿದ್ದರು.
ನನಗೆ ವಿಷಯ ತಿಳಿದಾಗ ಶಾಕ್ ಆಗಿತ್ತು. ನಾನು ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಮಾಡಬೇಕೆಂದು ಬಯಸಿದ್ದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಖುಷಿಯಾಗಿದ್ದರು. ಅವರಿಬ್ಬರು ಮಧ್ಯೆ ಏನೂ ಬರಲು ಸಾಧ್ಯವಿರಲಿಲ್ಲ ಎಂದು ನಿಕಿತಾ ಅವರು ತಮ್ಮನ್ನು ಬ್ಯಾನ್ ಮಾಡಿದಾಗ ಪ್ರತಿಕ್ರಿಯಿಸಿದ್ದರು.
ಸ್ಯಾಂಡಲ್ವುಡ್ ನನ್ನ ಮನೆಯಂತಿದೆ. 9 ವರ್ಷಗಳಿಂದ ಮನೆಯಲ್ಲಿ ಇದ್ದಂತಿತ್ತು. ಆದರೆ ಈಗ ನನ್ನ ಪೋಷಕರೇ ನನ್ನ ಮೇಲೆ ಕಿರುಚಿ ಬೇರೆಲ್ಲಾದರೂ ಹೋಗು ಎನ್ನುತ್ತಿರುವಂತೆ ಭಾಸವಾಗುತ್ತಿದೆ. ನನ್ನನ್ನು ಇದಕ್ಕೆ ಎಳೆಯಲಾಗಿದೆ. ಇದು ಸರಿಯಲ್ಲ ಎಂದು ನಟಿ ಹೇಳಿದ್ದರು. ದರ್ಶನ್ ನನ್ನ ಸಹನಟ ಮಾತ್ರ, ಈ ನಿಷೇಧದಿಂದ ತುಂಬಾ ಬೇಸರವಾಗಿದೆ ಎಂದು ಅಂದು ನಿಖಿತಾ ಹೇಳಿದ್ದರು.