ಕನ್ನಡದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.ಮೊಲದ ಸಿನಿಮಾದಲ್ಲೇ ಅಭಿಮಾನಿಗಳ ಮನಸ್ಸು ಗೆದ್ದ ನಟಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸದ್ಯ ಶ್ರೀಲೀಲಾ ನಟನೆಯ ಪುಷ್ಪ 2 ಸಿನಿಮಾದ ಸ್ಪೆಷನ್ ಹಾಡು ಸಖತ್ ಸೌಂಡ್ ಮಾಡ್ತಿದೆ. ಇದೇ ಖುಷಿಯಲ್ಲಿ ನಟಿ ನಯಾ ಫೋಟೋ ಶೂಟ್ ಮಾಡಿಸಿದ್ದ ನಟಿಯ ಸ್ಟೈಲ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ವೃತ್ತಿಬದುಕಿನ ಆರಂಭದಲ್ಲಿಯೇ ಒಳ್ಳೆ ಹಿಟ್ ಪಡೆದ ಈ ನಟಿ ಡೇಟ್ಸ್ ಗಾಗಿ ನಿರ್ದೇಶಕ-ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ. ಸದ್ಯ ಟಾಲಿವುಡ್ ನ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಅಲ್ಲೇ ಸೆಟಲ್ ಆಗೋ ಸೂಚನೆ ಇದೆ.
ಶ್ರೀಲೀಲಾ ತಮ್ಮ ಮೊದಲ ಸಿನಿಮಾದಿಂದಲೇ ಹುಡುಗರ ಮನ ಕದ್ದಿದ್ದಾರೆ. ಎರಡನೇ ಸಿನಿಮಾದಲ್ಲಿ ರವಿತೇಜಗೆ ಜೋಡಿಯಾಗಿ ನಟಿಸಿ ಯಶಸ್ಸು ಪಡೆದರು. ರವಿತೇಜ-ಶ್ರೀಲಿ ಅಭಿನಯದ ಧಮಾಕಾ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಅವರಿಗೆ ಅವಕಾಶಗಳಿಗೂ ಕಡಿಮೆ ಇಲ್ಲ. ಒಂದರ ಹಿಂದೆ ಒಂದರಂತೆ ಅವಕಾಶಗಳು ಸಿಗುತ್ತಲೇ ಇದೆ.
ತನ್ನ ಫ್ರೆಶ್ ಮತ್ತು ಸ್ಟೈಲಿಷ್ ಲುಕ್ ಅನ್ನು ಕಾಲಕಾಲಕ್ಕೆ ಪೋಸ್ಟ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದಾರೆ.
ಮಹೇಶ್ ಬಾಬು ಜೊತೆಗಿನ ಗುಂಟೂರು ಕರಂ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಈ ಚೆಲುವೆ ಆ ನಂತರ ಮತ್ತೊಂದು ಪ್ರಾಜೆಕ್ಟ್ ಅನೌನ್ಸ್ ಮಾಡಿರಲಿಲ್ಲ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದು ಈ ಹಾಡು ಟ್ರೆಂಡಿಂಗ್ ಆಗಿದೆ.