ರೈತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ರಂಜಾನ್, ಯುಗಾದಿ ಹಿನ್ನೆಲೆ, ಕುರಿ, ಮೇಕೆ ಬೆಲೆ ಏರಿಕೆ ಆಗಿದೆ.
ಈ ಹಿಂದೆ 20 ಕೆ.ಜಿ.ತೂಕದ ಕುರಿ ₹ 13 ಸಾವಿರ ಇದ್ದದ್ದು ಈಗ ₹ 15 ಸಾವಿರಕ್ಕೆ ಏರಿಕೆಯಾಗಿದೆ.
ಬೆಳಗ್ಗೆ ಹಲ್ಲು ಉಜ್ಜದೆ ತಿಂಡಿ ತಿನ್ನೋ ಅಭ್ಯಾಸ ಇದ್ಯಾ!?, ಹುಷಾರ್ ಕ್ಯಾನ್ಸರ್ ಬರಬಹುದು!
ಒಂದು ಮೇಕೆಗೆ ₹ 12 ಸಾವಿರ ಇದ್ದದ್ದು ₹ 14 ಸಾವಿರಕ್ಕೆ ಏರಿಕೆಯಾಗಿದೆ ಎರಡೂ ಹಬ್ಬಗಳು ಒಂದೇ ಬಾರಿಗೆ ಬಂದಿರುವ ಕಾರಣ, ಕುರಿ, ಮೇಕೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವರ್ಷದ ತೊಡಕಿಗೆ ಉತ್ತಮ ಬೆಲೆ ಸಿಗುತ್ತದೆ ಎನ್ನುವ ಕಾರಣದಿಂದಲೇ ಕೆಲವು ರೈತರು, ಕುರಿ, ಮೇಕೆಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದಾರೆ.
ಹಲವರು ಈಗಾಗಲೇ ತೂಕದ ಆಧಾರದಲ್ಲಿ ಮಾರಾಟ ಮಾಡುತ್ತಿದ್ದಾರೆ. 25 ಕೆ.ಜಿ.ಗಿಂತಲೂ ಹೆಚ್ಚು ತೂಕ ಬರುವ ಕುರಿಯನ್ನು ₹ 20 ಸಾವಿರದವರೆಗೂ ರೈತರು ಮಾರಾಟ ಮಾಡುತ್ತಿದ್ದಾರೆ.
ಮಟನ್ ಬೆಲೆ ಏರಿಕೆ ಸಂಭವ: ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕುರಿ ಹಾಗೂ ಒಂದು ಮೇಕೆ ಮಾಂಸ ₹ 700 ಇದೆ. ವರ್ಷದ ತೊಡಕು ಹಾಗೂ ರಂಜಾನ್ ಹಿನ್ನೆಲೆಯಲ್ಲಿ ಈ ಬೆಲೆಯಲ್ಲಿ ₹ 50ರಿಂದ ₹100ರಷ್ಟು ಜಾಸ್ತಿಯಾಗುವ ಸಂಭವವಿದೆ ಎನ್ನುತ್ತಾರೆ ಮಾಂಸದ ಅಂಗಡಿಯ ವ್ಯಾಪಾರಿಗಳು.
ಅಂತೆಯೇ ಮಾರುಕಟ್ಟೆಯಲ್ಲಿ 1 ಕೆಜಿ ಕೋಳಿ ಮಾಂಸಕ್ಕೆ (ಚಿಕನ್) ₹ 200 ಇದೆ. ಎರಡೂ ಹಬ್ಬಗಳ ಹಿನ್ನೆಲೆಯಲ್ಲಿ ಚಿಕನ್ ಬೆಲೆಯಲ್ಲೂ ₹ 20ರಿಂದ ₹ 50ರವರೆಗೆ ಬೆಲೆ ಹೆಚ್ಚಾಗಬಹುದು ಎಂದು ಅಂದಾಜಿಸುತ್ತಾರೆ.