ಧಾರವಾಡ : ಕನ್ನಡ ನಾಡು ಉದಯವಾಗಿ ಅರವತ್ತೆಂಟು ವರ್ಷವಾಯಿತು. ಒಂದೆಡೆ ಅಭಿವೃದ್ದಿಯಾದರೇ ಇನ್ನೊಂದೆಡೆ ಕನ್ನಡ ಭಾಷೆ, ಆಹಾರ,ಉಡುಗೆ ತೊಡುಗೆ, ಸಂಸ್ಕೃತಿಗಳ ಮೇಲೆ ಅನ್ಯ ಸಂಸ್ಕೃತಿಯ ಪ್ರಭಾವದಿಂದ ಕನ್ನಡತನ ಮರೆಯಾಗುತ್ತಿದೆ. ಕನ್ನಡಿಗರು ಎಚ್ಚೆತ್ತುಕೊಂಡು ಅಚ್ಚಕನ್ನಡದಲ್ಲಿ ಮಾತನಾಡೋದು, ಪ್ರಾಥಮಿಕ ಶಿಕ್ಷಣವನ್ನು ಕನ್ನಡಭಾಷೆಯಲ್ಲಿ ಕಲಿಸುವುದು. ಕನ್ನಡದ ಪುಸ್ತಕ, ದಿನ ಪತ್ರಿಕೆಗಳನ್ನು ಕೊಂಡು ಓದುವಂತಾಗಬೇಕಿದೆ ಎಂದು ವೈ.ಜಿ ಭಗವತಿ ಹೇಳಿದರು.
ತಾಲೂಕಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಮಾರಂಭದಲ್ಲಿ ಅತಿಥಿ ಉಪನ್ಯಾಸಕರಾಗಿ ಅವರು ಭಾಗವಹಿಸಿ ಮಾತನಾಡಿದರು. ಅನೇಕ ಕವಿಗಳು, ದಾರ್ಶನಿಕರು ಈ ನಾಡಿನ ಹಿರಿಮೆಯನ್ನು ಬೆಳೆಸಿದ್ದಾರೆ. ಇಂದಿನ ನವ ಪೀಳಿಗೆ ಇದನ್ನು ಉಳಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕಾಗಿ ಪ್ರತಿಯೊಬ್ಬರು ಕನ್ನಡ ನಾಡಿನ ಬಗ್ಗೆ ಅಭಿಮಾನ ಹೊಂದಬೇಕಾಗಿದೆ ಎಂದರು.