ಗದಗ: ಔಷಧಿಯ ಸಸ್ಯಕಾಶಿ, ಉತ್ತರ ಕರ್ನಾಟಕದ ಸಹ್ಯಾದ್ರಿ, ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದ ಕಪ್ಪತಗುಡ್ಡಕ್ಕೆ ಮತ್ತೆ ಕಂಟಕ ಶುರುವಾದಂತಿದೆ. ವನ್ಯ ಜೀವಿ ಧಾಮ ವ್ಯಾಪ್ತಿಯ 10 ಕಿಲೋಮೀಟರ್ ಸೂಕ್ಷ್ಮ ಅರಣ್ಯ ಸಂರಕ್ಷಣೆ ಪ್ರದೇಶವನ್ನು 1 ಕಿಲೋಮೀಟರ್ ಗೆ ಕುಗ್ಗಿಸುವ ಕುತಂತ್ರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರ್ತಿದೆ. ಕೇಂದ್ರ ಪರಿಸರ ಇಲಾಖೆ ಹೊರಡಿಸಿದ ಅಧಿಸೂಚನೆ ಪರಿಸರ ಪ್ರೇಮಿಗಳು, ಸಂಘಟಿಕರು, ಮಠಾಧೀಶರ ಆಕ್ರೋಶಕ್ಕೆ ಕಾರಣವಾಗಿದೆ. ಗದಗ ಜಿಲ್ಲೆ ವನ್ಯಜೀವಿ ಧಾಮ ಕಪ್ಪತ್ತಗುಡ್ಡಕ್ಕೆ ಕಂಟಕ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ಬಾಂಗ್ಲಾ ವಾಸಿಗಳಿಗೆ ಅಕ್ರಮ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿ ಅಂದರ್!
ಹೌದು, ಈ ಎಲ್ಲಾ ದೃಶ್ಯಗಳು ಕಂಡು ಬರೋದು ಗದಗ ಜಿಲ್ಲೆಯ ವನ್ಯಜೀವಿ ಧಾಮ ಕಪ್ಪತ್ತಗುಡ್ಡದ ವ್ಯಾಪ್ತಿಯಲ್ಲಿ. ಉತ್ತರ ಕರ್ನಾಟಕ ಸಹ್ಯಾದ್ರಿ ಪರ್ವತ, ಆಯುರ್ವೇದ ಔಷಧಿಯ ಸಸ್ಯಕಾಶಿ, ಖನಿಜ ಸಂಪನ್ಮೂಲಗಳ ಖಜಾನೆ ಎಂದೆ ಖ್ಯಾತಿ ಪಡೆದ ಕಪ್ಪತ್ತಗುಡ್ಡಕ್ಕೆ ಕಂಟಕ ಶುರುವಾದಂತಿದೆ. ಗದಗ ಜಿಲ್ಲೆಯಲ್ಲಿ ಸುಮಾರು 69 ಕಿಲೋಮೀಟರ್ ವ್ಯಾಪ್ತಿ ವರೆಗೆ ಕಪ್ಪತಗುಡ್ಡ ವ್ಯಾಪಿಸಿದೆ. ವನ್ಯಜೀವಿ ಧಾಮ ಎಂದು ಸಹ ಘೋಷಣೆ ಮಾಡಲಾಗಿದೆ. ಅದರ ಸುತ್ತಲಿನ 10 ಕಿಲೋಮೀಟರ್ ವರೆಗೆ ಸೂಕ್ಷ್ಮಅರಣ್ಯ ಪ್ರದೇಶವಿತ್ತು. ಈಗ 10 ಕಿಲೋಮೀಟರ್ ಬದಲಾಗಿ, 1 ಕಿಲೋಮೀಟರ್ ಸೂಕ್ಷ್ಮ ಅರಣ್ಯ ಪ್ರದೇಶ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಕೇಂದ್ರ ಪರಿಸರ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಯಾರಾದ್ರೂ ಪರ, ವಿರೋಧ ಬಗ್ಗೆ ಅರ್ಜಿಸಲ್ಲಿಸಲು ಕಡಿಮೆ ಕಾಲಾವಕಾಶ ನೀಡಿದೆ. ಈ ಅಧಿಸೂಚನೆ ಗೌಪ್ಯವಾಗಿಟ್ಟಿದೆ. ತಕರಾರು, ಅಥವಾ ಅರ್ಜಿ ಸಲ್ಲಿಸಲು ಇದೆ ನವೆಂಬರ್ 30 ಕೊನೆಯ ದಿನವಾಗಿದೆ. ಇದರಿಂದ ಪರಿಸರ ಪ್ರೇಮಿಗಳಲ್ಲಿ ಆತಂಕ ಶುರುವಾಗಿದೆ. ಸೂಕ್ಷ್ಮ ಅರಣ್ಯ ಪ್ರದೇಶ ವ್ಯಾಪ್ತಿ ಕಡಿಮೆ ಗೊಳಿಸಿರುವುದರಿಂದ ಕಪ್ಪತ್ತಗುಡ್ಡಕ್ಕೆ ಗಂಡಾಂತರ ಎದುರಾಗಲಿದೆ. ಇಲ್ಲಿ ಮತ್ತೆ ಕಬ್ಬಿಣ ಅದಿರು, ಗೋಲ್ಡ್ ಮೈನಿಂಗ್, ಕಲ್ಲು ಗಣಿಗಾರಿಕೆ ಹೀಗೆ ಅನೇಕ ಗಣಿಗಾರಿಕೆಗೆ ಅವಕಾಶ ಕೊಟ್ಟಂತಾಗುತ್ತೆ. ಕಪ್ಪತ್ತಗುಡ್ಡ ಹಸಿರು ಉಳಿಬೇಕು, ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಚರ್ಚೆ ಮಾಡಿ ಸೂಕ್ಷ್ಮ ಪ್ರದೇಶ ವ್ಯಾಪ್ತಿ ಹೆಚ್ಚಿಸಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.
ಗಣಿ ಕುಳಗಳ ಒತ್ತಡಕ್ಕೆ ಮಣಿದು ವಿಸ್ತೀರ್ಣ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವಿದೆ. ಸೂಕ್ಷ್ಮ ಅರಣ್ಯ ಪ್ರದೇಶ ವ್ಯಾಪ್ತಿಗೆ ಕಡಿವಾಣ ಹಾಕಲಾಗ್ತಿದೆ. ಅರಣ್ಯ ಪ್ರದೇಶ ಕಡಿಮೆಗೊಳಿಸುವ ಆದೇಶ ಚಂಡು ಕೇಂದ್ರ ಪರಿಸರ ಇಲಾಖೆ ಅಂಗಳದಲ್ಲಿದೆ. 2023 ಜೂನ್ 23 ರಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆಯಂತೆ. ಈಗ ಕಪ್ಪತ್ತಗುಡ್ಡ ವ್ಯಾಪ್ತಿಯ ಸುತ್ತಲು ಡೀಮ್ಡ್ ಅರುಣ್ಯ ಪ್ರದೇಶವಿದೆ. ಕಪ್ಪತ್ತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ಮಾಡಬೇಕು ಅಂದ್ರೆ ಕೇಂದ್ರ ವನ್ಯಜೀವಿ ಮಂಡಳಿ, ಪರಸರ ಇಲಾಖೆ ಅವಕಾಶ ನೀಡಬೇಕು. ಜೊತೆಗೆ ರಾಜ್ಯ ಸಚಿವ ಸಂಪುಟದ ಅನುಮತಿ ಬೇಕು. 10 ಕಿಲೋಮೀಟರ್ ವ್ಯಾಪ್ತಿ ಮಾಡುವುದರಿಂದ ಸರ್ಕಾರಕ್ಕೆ ಆದಾಯಕ್ಕೆ, ಅಭಿವೃದ್ಧಿಗೆ ಹೊಡೆತ ಬಿಳ್ಳುತ್ತೆ. ಅರಣ್ಯ ಪ್ರದೇಶ ಬಳಿ, ರೆಸಾರ್ಟ್, ಡೊಡ್ಡ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಇಲ್ಲ. ತಕರಾರು ಬಗ್ಗೆ ಸರ್ಕಾರ ವೆಬ್ ಸೈಟ್ ನೀಡಿದೆ. ಆ ಮೂಲಕ ಯಾರಾದ್ರೂ ಅರ್ಜಿ ಸಲ್ಲಿಸಬಹುದು. ಇ-ಮೇಲ್ ಅಥವಾ ಪೋಸ್ಟ್ ಮೂಲಕ ತಕರಾರು ಅರ್ಜಿ ಸಲ್ಲಿಸಬಹುದು. ಇದು ಸರ್ಕಾರದ ಅಧೀನದಲ್ಲಿ ಇರುವುದರಿಂದ ಜಿಲ್ಲಾಡಳಿತ, ರಾಜ್ಯ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ. ಸುಪ್ರೀಂಕೋರ್ಟ್ ಆದೇಶ ಪ್ರಕಾರ ನಡೆದುಕೊಳ್ಳುತ್ತೆವೆ, ಸಂಘಟಿಕರು ಕೊಟ್ಟ ಮನವಿ ಸರ್ಕಾರಕ್ಕೆ ಸಲ್ಲಿಸುತ್ತೆವೆ ಅಂತಿದ್ದಾರೆ ಜಿಲ್ಲಾಧಿಕಾರಿಗಳು.
ಗಣಿ ಕುಳಗಳು ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿ ಮತ್ತೆ ಸಂಪತ್ತನ್ನು ಲೂಟಿ ಮಾಡಲೆಂದೇ ಈ ಸಂಚು ರೂಪಿಸಿವೆ ಎನ್ನಲಾಗ್ತಿದೆ. ಇದರ ವಿರುದ್ಧ ಗದಗ ಜಿಲ್ಲಾಧಿಕಾರಿ ಕಚೇರಿ ಬಳಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಸುತ್ತ 10 ಕಿಲೋಮೀಟರ್ ವರೆಗೆ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಗಣಿ ಕುಳಗಳ ಆಸೆ, ಆಮಿಷಗಳಿಗೆ ಒಳಗಾಗಿ ಅರಣ್ಯ ವ್ಯಾಪ್ತಿ ಕಡಿಮೆ ಮಾಡಿದ್ದೇ ಆದ್ರೆ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ವನ್ಯಜೀವಿ ಧಾಮ ಹಾಗೂ ಮೀಸಲು ಸೂಕ್ಷ್ಮ ಅರಣ್ಯ ವ್ಯಾಪ್ತಿಯ 10 ಕಿಲೋಮೀಟರ್ ವ್ಯಾಪ್ತಿ ಮುಂದುವರೆಸಲಿ ಎಂಬುದು ಎಲ್ಲಾ ಪರಿಸರ ಪ್ರೇಮಿಗಳು, ಮಠಾಧೀಶರ ಒತ್ತಾಯವಾಗಿದೆ. ಸೂಕ್ಷ್ಮ ಅರಣ್ಯ ಪ್ರದೇಶ ವ್ಯಾಪ್ತಿ ಹೆಚ್ಚಿಸುತ್ತಾರಾ? ಅಥವಾ ಕಡಿಮೆ ಗೊಳಿಸ್ತಾರಾ ಕಾದು ನೋಡಬೇಕಿದೆ….