ಬಾಲಿವುಡ್ (Bollywood0) ಖ್ಯಾತ ನಟ ಸನ್ನಿ ಡಿಯೋಲ್ (Sunny Deol) ರಸ್ತೆಯಲ್ಲಿ ಕಂಠಪೂರ್ತಿ ಕುಡಿದುಕೊಂಡು (Drinks) ಜೋಲಿ ಹೊಡೆಯುತ್ತಾ ಬರುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಈ ವಿಡಿಯೋವನ್ನು ಫೋಟೋಗೆ ಕನ್ವರ್ಟ್ ಮಾಡಿಯೂ ಟ್ರೋಲ್ ಮಾಡಲಾಗಿತ್ತು. ಅನೇಕರು ನಾನಾ ರೀತಿಯಲ್ಲಿ ಕಾಮೆಂಟ್ ಕೂಡ ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಡಿಯೋಲ್ ಅಲರ್ಟ್ ಆಗಿದ್ದಾರೆ.
ಬಾಲಿವುಡ್ ಪಾರ್ಟಿಗಳಲ್ಲಿ ತೂರಾಡಿಕೊಂಡು ಕಾರು ಹತ್ತುವುದು ಸಾಮಾನ್ಯ. ಅನೇಕ ನಟ ನಟಿಯರು ಪಾರ್ಟಿಗಳಿಂದ ಆಚೆ ಬರುವಾಗ ಜೋಲಿ ಹೊಡೆಯುವ ದೃಶ್ಯವನ್ನು ಅನೇಕರು ಸೆರೆ ಹಿಡಿದಿದ್ದಾರೆ. ಆದರೆ, ಸನ್ನಿ ಡಿಯೋಲ್ ತೂರಾಡಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಬರುವ ವಿಡಿಯೋ ಅದಾಗಿತ್ತು. ಹಾಗಾಗಿ ವೈರಲ್ ಆಗಿತ್ತು.
ಆ ವಿಡಿಯೋ ಯಾವುದು, ಅದರ ಅಸಲಿತ್ತು ಏನು ಎನ್ನುವುದನ್ನು ಮತ್ತೊಂದು ವಿಡಿಯೋ ಮೂಲಕ ಸನ್ನಿ ಸ್ಪಷ್ಟ ಪಡಿಸಿದ್ದಾರೆ. ರಸ್ತೆಯಲ್ಲಿ ತೂರಾಡುತ್ತ ಬರುವ ಮತ್ತು ಆ ದೃಶ್ಯವನ್ನು ಹಲವು ಕ್ಯಾಮೆರಾಗಳು ಸೆರೆ ಹಿಡಿಯುತ್ತಿರುವ ವಿಡಿಯೋವನ್ನು ಶೇರ್ ಮಾಡಿ, ಗಾಳಿ ಸುದ್ದಿ ಪಯಣ ಇಲ್ಲಿಗೆ ಮುಗೀತು ಎಂದು ಬರೆದುಕೊಂಡಿದ್ದಾರೆ. ಅದು ಸಿನಿಮಾದ ದೃಶ್ಯವೆಂದು ಈ ಮೂಲಕ ಸ್ಪಷ್ಟ ಪಡಿಸಿದ್ದಾರೆ.