ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ತಾಂತ್ರಿಕಾ ದೋಷದ ಕಾರಣದಿಂದ ಕಳೆದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. ಸುನೀತಾ ವಿಲಿಯಮ್ಸ್ ಫೆಬ್ರವರಿ 2025ರವರೆಗೆ ಬಾಹ್ಯಾಕಾಶದಿಂದ ವಾಪಸ್ ಭೂಮಿಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಕ್ರಿಸ್ ಮಸ್ ಸೆಲೆಬ್ರೇಟ್ ಮಾಡಿದ್ದಾರೆ.
ಬಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್ ಅಲ್ಲಿಯೇ ಹಬ್ಬಗಳನ್ನು ಎಂಜಾಮ್ ಮಾಡ್ತಿದ್ದಾರೆ. ಎಲ್ಲ ಖುಷಿಯ ಕ್ಷಣಗಳ ಫೋಟೋಗಳನ್ನು ನಾಸಾಗೆ ಕಳುಹಿಸುತ್ತಿದ್ದಾರೆ. ದೀಪಾವಳಿಯ ಸಮಯದಲ್ಲಿ ಸ್ಪೇಸ್ ಸ್ಟೇಷನ್ನಲ್ಲಿ ದೀಪಾವಳಿಯನ್ನು ಆಚರಿಸಿದದ್ದ ಸುನೀತಾ ಇದೀಗ ಕ್ರಿಸ್ ಮಸ್ ಆಚರಣೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಕ್ರಿಸ್ಮಸ್ ಆಚರಣೆಯನ್ನು ಮಾಡಿದ್ದಾರೆ. ಮಂಗಳವಾರ ಅಂದ್ರೆ ಇಂದು ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ ಕೆಲವು ಫೋಟೋಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಸುನೀತಾ ವಿಲಿಯಮ್ಸ್ ಮತ್ತೊಬ್ಬ ಗಗನಯಾತ್ರಿ ಡಾನ್ ಪೆಟ್ಟಿಟ್ ಜೊತೆ ಸಂತಾ ಕ್ಯಾಪ್ ಹಾಕಿಕೊಂಡು ಸಂಭ್ರಮದಿಂದ ತೆಗೆದುಕೊಂಡ ಫೋಟೋವನ್ನು ನಾಸಾ ಹಂಚಿಕೊಂಡಿದೆ. ಐಎಸ್ಎಸ್ನಲ್ಲಿ ಸುನೀತಾ ಹಾಗೂ ಪೆಟ್ಟಿಟ್ ತುಂಬಾ ಸಂಭ್ರಮದೊಂದಿಗೆ ಕ್ರಿಸ್ ಮಸ್ ಆಚರಿಸಿದ್ದಾರೆ.
ಅನದರ್ ಡೇ, ಅನದರ್ ಸ್ಲೇ ಎಂದು ಅಡಿಬರಹದೊಂದಿಗೆ ಫೋಟೋ ಹಂಚಿಕೊಂಡಿರುವ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ ಡಾನ್ ಪೆಟ್ಟಿಟ್ ಹಾಗೂ ಸುನೀತಾ ವಿಲಿಯಮ್ಸ್ ಫನ್ ಹಾಲಿಡೇಗೆ ಪೋಸ್ ಕೊಟ್ಟಿದ್ದಾರೆ. ಈ ಒಂದು ಚಿತ್ರ ಸ್ಪೇಸ್ ಸ್ಟೇಷನ್ನಲ್ಲಿರುರುವ ಕೊಲಂಬಸ್ ಲ್ಯಾಬರೋಟರಿ ಮಾಡ್ಯೂಲ್ನ ಹ್ಯಾಮ್ ರೇಡಿಯೋದಲ್ಲಿ ಮಾತನಾಡುವಾಗ ತೆಗೆದುಕೊಂಡಿದ್ದು ಎಂದು ಹೇಳಿದೆ.
ಇಬ್ಬರು ಗಗನಯಾತ್ರಿಗಳು ಕ್ರಿಸ್ಮಸ್ ಆಚರಣೆಗೆ ವಿಶೇಷ ಅಡುಗೆಯನ್ನು ತಯಾರು ಮಾಡುತ್ತಿದ್ದಾರೆ. ತಮ್ಮ ಕುಟುಂಬದೊಂದಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಸಂಪರ್ಕದಲ್ಲಿದ್ದಾರೆ. ರೊಬೊಟಿಕ್ ಕಾರ್ಬೋ ಮಿಷನ್ ಮೂಲಕ ಅವರು ಆಹಾರ ತಯಾರಿಕೆಗೆ ಬೇಕಾದ ತಾಜಾ ಪದಾರ್ಥಗಳ ಡೆಲಿವರಿ ಆಗುತ್ತಿದೆ ಎಂದು ಹೇಳಲಾಗಿದೆ.
ಎಂಟು ದಿನದ ಮಿಷನ್ಗಾಗಿ ಬೋಯಿಂಗ್ ಸ್ಟರ್ಲೈನರ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ತೊಂದರೆಗಳಿಂದ ವಾಪಸ್ ಬರಲು ಆಗಲಿಲ್ಲ. ಜೂನ್ 5 ರಂದು ಭೂಮಿಯಿಂದ ತೆರಳಿದ ಸುನೀತಾ ವಿಲಿಯಮ್ಸ್ ಇನ್ನೂ ಕೂಡ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಇದ್ದು 2025ರ ಫೆಬ್ರವರಿಯಲ್ಲಿ ಭೂಮಿಗೆ ಮರಳಿದ್ದಾರೆ ಎನ್ನಲಾಗುತ್ತಿದೆ.