2019ರಲ್ಲಿ ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಶ್ರೀಲೀಲಾಗೆ ಭರಾಟೆ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಈ ಚಿತ್ರದ ಬಳಿಕ ಟಾಲಿವುಡ್ ಗೆ ಹಾರಿದ ನಟಿಗೆ ಅಲ್ಲಿ ಅದೃಷ್ಟ ಹೇಳಿಕೊಳ್ಳುವ ಮಟ್ಟಿಗೆ ಸಿಗದೆ ಹೋಯಿತು.
ಶ್ರೀಲೀಲಾ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡದೆ ಹೋದ್ರೆ ಆಕೆ ಮಾತ್ರ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಶ್ರೀಲೀಲಾ ಸುಮಾರು 5.3 ಮಿಲಿಯನ್ ಫಾಲೋವರ್ಸ್ನ ಹೊಂದಿದ್ದಾರೆ. ಆಗಾಗ ವಿಭಿನ್ನ ಫೋಟೋಶೂಟ್ಗಳನ್ನು ಮಾಡಿಸಿ ತಮ್ಮ ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಪಡ್ಡೆ ಹುಡುಗರ ಹೃದಯ ಕದ್ದ ನಟಿ ಶ್ರೀಲೀಲಾ ಬೋಲ್ಡ್ ಫೋಟೋಶೂಟ್ ಮೂಲಕ ಮತ್ತೆ ಟೆಂಪರೇಚರ್ ಹೆಚ್ಚಿಸಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ನಟಿ ಶ್ರೀಲೀಲಾ ಮಿಂಚಿದ್ದು, ಮಿರರ್ ಮುಂದೆ ಮಸ್ತ್ ಪೋಸ್ ನೀಡಿದ್ದಾರೆ.
ಬಾತ್ರೂಮ್ನಲ್ಲಿ ನಟಿ ಶ್ರೀಲೀಲಾ ಫೋಟೋಶೂಟ್ ಮಾಡಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಫೋಟೋ ನೋಡಿದ ನೆಟ್ಟಿಗರು ನಿಮಗೆ ಬೇರೆ ಜಾಗ ಸಿಗಲಿಲ್ವಾ ಎಂದು ಕಾಲೆಳೆದಿದ್ದಾರೆ.
ಹಿರಿಯ ನಟ ಶ್ರೀಕಾಂತ್ ಅವರ ಮಗ ನಟಿಸಿದ ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ನಟಿ ಕಡಿಮೆ ಅವಧಿಯಲ್ಲಿ ಮಹೇಶ್ ಬಾಬು ಅವರಂತಹ ಸ್ಟಾರ್ ಹೀರೋಗಳೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ನಟಿ ಶ್ರೀಲೀಲಾ ಒಂಬತ್ತು ಚಿತ್ರಗಳಿಗೆ ಸಹಿ ಹಾಕಿದ್ರು. ಭಗವಂತ ಕೇಸರಿ ಹಿಟ್ ಆಯ್ತು. ಬಳಿಕ ಬಂದ ಶ್ರೀಲೀಲಾ ಚಿತ್ರಗಳು ಫ್ಲಾಪ್ ಲಿಸ್ಟ್ಗೆ ಸೇರಿದೆ. ಇದೀಗ ಶ್ರೀಲೀಲಾ ಸೋಲಿನ ಸುಳಿಯಿಂದ ಹೊರ ಬರಲು ಅಳೆದು ತೂಗಿ ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದಾರಂತೆ.
ಸೌತ್ ಬ್ಯೂಟಿ ಶ್ರೀಲೀಲಾ ಇದೀಗ ಬಾಲಿವುಡ್ ಇಂಡಸ್ಟ್ರಿಗೆ ಹಾರ್ತಿದ್ದಾರೆ. ಸ್ಟಾರ್ ಹೀರೋ ಮಗನಿಗೆ ಶ್ರೀಲೀಲಾ ನಾಯಕಿ ಆಗ್ತಿದ್ದಾರೆ ಎಂಬ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಜೊತೆ ಸಿನಿಮಾ ಶ್ರೀಲೀಲಾ ಸಿನಿಮಾ ಮಾಡ್ತಿದ್ದಾರೆ.
ಈ ಮೊದಲು ಚಿತ್ರಗಳಿಗೆ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟಿ ಗುಂಟೂರು ಖಾರಂ ಚಿತ್ರದ ಬಳಿಕ ಏಕ್ ದಮ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಲಕ್ಷಗಳಲ್ಲಿ ಪಡೆಯುತ್ತಿದ್ದ ಸಂಭಾವನೆ ತಮ್ಮ ಮುಂದಿನ ಸಿನಿಮಾಗಳಿಗಾಗಿ 3 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ.