ಟಾಲಿವುಡ್ ಬ್ಯೂಟಿ ನಟಿ ಸಮಂತಾ ಸಿನಿಮಾಗಳ ಜೊತೆ ಜೊತೆಗೆ ತಮ್ಮ ಸೌಂದರ್ಯದ ಮೂಲಕವು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಕೆಲ ತಿಂಗಳ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಬೋಲ್ಡ್ ಫೋಟೋಗಳ ಮೂಲಕ ಸದ್ದು ಮಾಡ್ತಿರುವ ಸ್ಯಾಮ್, ಇದೀಗ ಮತ್ತೆ ಹಾಟ್ ಲುಕ್ ಕ್ಯಾಮಾರಾಗೆ ಫೋಸ್ ನೀಡಿದ್ದಾರೆ. ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಚಿಕಿತ್ಸೆ ಪಡೆದು ಇದೀಗ ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗ್ತಿದ್ದಾರೆ. ಆರಂಭದಲ್ಲಿ ಹೋಮ್ಲಿ ಗರ್ಲ್ ಆಗಿ ಕಾಣಿಸಿಕೊಳ್ತಿದ್ದ ಸಮಂತಾ ಇದೀಗ ದಿನಕಳೆದಂತೆ ಸಖತ್ ಹಾಟ್ ಹಾಟ್ ಅವತಾರಗಳಲ್ಲಿ ಮಿಂಚುತ್ತಿದ್ದಾರೆ.
ನಟಿಯ ಬೋಲ್ಡ್ ನೆಸ್ ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಸಮಂತಾ ಫೋಟೋಗೆ ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮೈಯೋಸಿಟಿಸ್ ನಿಂದ ಬಳಲುತ್ತಿದ್ದ ಸಮಂತಾ, ಸಿನಿ ಕೆರಿಯರ್ ಗೆ ವಿರಾಮ ತೆಗೆದುಕೊಂಡ್ರು. ಕಾಯಿಲೆಗೆ ಚಿಕಿತ್ಸೆ ಪಡೆದು ಕೆಲವು ತಿಂಗಳು ವಿಶ್ರಾಂತಿ ಪಡೆದಿದ್ದಾರೆ. ಸಮಂತಾ ಕೊನೆಯದಾಗಿ ತೆಲುಗಿನ ‘ಖುಷಿ’ ಚಿತ್ರದಲ್ಲಿ ನಟಿಸಿದ್ದರು. ಆ ನಂತರ ಬೇರೆ ಯಾವ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಇದೀಗ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸಿಟಾಡೆಲ್ ವೆಬ್ ಸೀರಿಸ್ ನಲ್ಲಿ ವರುಣ್ ಧವನ್ ಜೊತೆ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಇದು ಅಮೇರಿಕನ್ ಸರಣಿಯ ಸಿಟಾಡೆಲ್ ವೆಬ್ ಸರಣಿಯ ರಿಮೇಕ್ ಆಗಿದೆ. ರಾಜ್, ಡಿಕೆ ಸಿಟಾಡೆಲ್ ನಿರ್ದೇಶನ ಮಾಡಿದ್ದು,. ಶೀಘ್ರದಲ್ಲೇ ಸೀರಿಸ್ ರಿಲೀಸ್ ಆಗಲಿದೆ.
2010ರಲ್ಲಿ ಗೌತಮ್ ವಾಸುದೇವ್ ಮೆನನ್ಸ್ ನಿರ್ದೇಶನದ “ವಿನೈಥಾಂಡಿ ವರುವಾಯಾ” ಎಂಬ ತಮಿಳು ಸಿನಿಮಾದಲ್ಲಿ ಚಿಕ್ಕ ಪಾತ್ರದ ಮೂಲಕ ಸಮಂತಾ ಸಿನಿ ಜರ್ನಿ ಆರಂಭಿಸಿದರು. ಅದೇ ವರ್ಷ ಸಮಂತಾ ನಟನೆಯ “ಯೇಂ ಮಾಯಾ ಚೇಸಾವೆ” ರಿಲೀಸ್ ಆಗಿದ್ದು ಆ ಚಿತ್ರದ ಬಳಿಕ ಸಮಂತಾ ಸಾಕಷ್ಟು ಖ್ಯಾತಿ ಘಳಿಸಿದರು.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾದಲ್ಲಿ ಸಮಂತಾ ಉ ಅಂಟಾವ ಉ ಊ ಅಂಟಾವ ಹಾಡಿಗೆ ಸ್ಟೆಪ್ ಹಾಕಿದ್ದು ಈ ಹಾಡು ಭಾರಿ ವೈರಲ್ ಆಗಿತ್ತು. ಆ ಬಳಿಕ ಕೆಲ ಸಮಯ ಸಿನಿಮಾಗಳಿಂದ ದೂರವಿದ್ದ ನಟಿ ಇದೀಗ ಭರ್ಜರಿ ಎಂಟ್ರಿಕೊಡೋಕೆ ರೆಡಿಯಾಗಿದ್ದಾರೆ.