ಮೈಸೂರು: ಜಿಲ್ಲೆಯ ಪಟಾಕಿ ವ್ಯಾಪಾರದ ಮಳಿಗೆ ಗೋದಾಮಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಾರಾಟ ಮಳಿಗೆ ದಾಸ್ತಾನು ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ 20ಕ್ಕೂ ಹೆಚ್ಚು ಅಗ್ನಿ ನಂದಿಸುವ ಸಾಧನ ಇರಿಸಲಾಗಿದೆ. ಇದರ ಜೊತೆಗೆ ಬಕೆಟ್ನಲ್ಲಿ ಮರಳು ನೀರು ಸಂಗ್ರಹಣೆ ಮಾಡಲಾಗಿದೆ. 10 ಆಟೋಮ್ಯಾಟಿಕ್ ಅಗ್ನಿ ನಂದಿಸುವ ಸಾಧನ,
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
10 ಮ್ಯಾನ್ಯುಯಲ್ ಅಗ್ನಿ ನಂದಿಸುವ ಸಾಧನ, 40 ಡಿಗ್ರಿ ಉಷ್ಣಾಂಶ ತಾಗಿದರೆ ಆಟೋಮ್ಯಾಟಿಕ್ ಆಗಿ ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಲಾಗಿದೆ. ಬೆಂಕಿ ಅವಘಡ ಸಂಭವಿಸಿದರೆ ಯಾವ ರೀತಿ ನಂದಿಸಬೇಕೆಂಬುವುದರ ಬಗ್ಗೆ ಪ್ರತಿ ಸಿಬ್ಬಂದಿಗೂ ಅಗ್ನಿಶಾಮಕ ಸಿಬ್ಬಂದಿಯಿಂದ ತರಬೇತಿ ನೀಡಲಾಗಿದೆ.