ಕನ್ನಡದ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಮೂಲತಃ ಕೊಡಗಿನವರು. ಕೊಡಗಿನಲ್ಲೇ ಹುಟ್ಟಿ ಬೆಳೆದ ರಶ್ಮಿಕಾ ಸದ್ಯ ಮುಂಬೈನಲ್ಲಿ ವಾಸವಾಗಿದ್ದಾರೆ. ಆದರೂ ಆಗಾಗ ಕೊಡಗಿಗೆ ಭೇಟಿ ನೀಡುವ ನಟಿ ಇದೀಗ ಕೊಡವ ಸಂಪ್ರದಾಯದಂತೆ ಸೀರೆಯುಟ್ಟು ಮಿಂಚಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿ ಮಿಂಚಿದ ರಶ್ಮಿಕಾ ಸದ್ಯ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಟಾಲಿವುಡ್ ಬಳಿಕ ಬಾಲಿವುಡ್ ಗೆ ಎಂಟ್ರಿಕೊಟ್ಟಿರೋ ನಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಈ ಮಧ್ಯೆ ಕೊಂಚ ಬ್ರೇಕ್ ತೆಗೆದುಕೊಂಡು ಸ್ನೇಹಿತೆಯ ಮದುವೆಗಾಗಿ ಕೊಡಗಿಗೆ ಭೇಟಿ ನೀಡಿದ್ದಾರೆ. ಈ ವೇಳೆ ನಟಿ ರಾಯಲ್ ಬ್ಲೂ ಸೀರೆಯಲ್ಲಿ ಚೆಂದದ ಗೊಂಬೆಯಂತೆ ಕಾಣಿಸಿಕೊಂಡಿದ್ದಾರೆ.
ಸಾಲು ಸಾಲು ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಆಗಾಗ ಕೊಡಗಿಗೆ ಬಂದು ಪೋಷಕರ ಜೊತೆ ಕಾಲ ಕಳೆಯುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಾನು ಹುಟ್ಟಿ ಬೆಳೆದ ಊರೇ ನನಗೆ ಎಂದೆಂದಿಗೂ ಚೆಂದ ಎಂದಿದ್ದಾರೆ.
ಮದುವೆ ಸಮಾರಂಭವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ರು. ಈ ವೇಳೆ ತನ್ನ ಆಪ್ತರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕೂರ್ಗ್ ಶೈಲಿಯಲ್ಲಿ ಸೀರೆಯುಟ್ಟು ಪೋಸ್ ಕೊಟ್ಟ ರಶ್ಮಿಕಾ ಫೋಟೋಗಳಿಗೆ ಲೈಕ್ಗಳ ಸುರಿಮಳೆ ಆಗಿದೆ.
ಕೊಡಗು ನನ್ನ ಹೃದಯದಲ್ಲಿ ಇರುವ ಸ್ಥಳ. ಇವತ್ತು ನನ್ನ ಹುಡುಗಿಯರ ಜೊತೆ ಇದ್ದೇನೆ. ಆದರೆ ವಧು ಯಾತ್ರಾ ಮದುವೆ ಕಾರ್ಯದಲ್ಲಿ ಬ್ಯುಸಿ ಇರುವುದರಿಂದ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನೀವು, ನಿಮ್ಮ ಸಂಗಾತಿ ಜೀವನಪೂರ್ತಿ ಖುಷಿ ಮತ್ತು ಆರೋಗ್ಯದಿಂದ ಇರು ಎಂದು ಬಯಸುತ್ತೇನೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕೈ ತುಂಬಾ ಸಿನಿಮಾಗಳಿವೆ. ಮುಂಬೈ, ಹೈದರಾಬಾದ್, ಫಾರಿನ್ ಅಂತ ಶೂಟಿಂಗ್ಗಾಗಿ ತಿರುಗಾಡುತ್ತಲೇ ಇರುತ್ತಾರೆ. ಇದರ ನಡುವೆ ಕೆಲಸಕ್ಕೆ ಬ್ರೇಕ್ ಕೊಟ್ಟು ಗೆಳತಿಯ ಮದುವೆಗೆ ರಶ್ಮಿಕಾ ಭಾಗಿಯಾಗಿದ್ದಾರೆ.