ಪಾಕಿಸ್ತಾನ: ಪಾಕಿಸ್ತಾನದ ಕರಾಚಿಯಲ್ಲಿರುವ ಯುಕೆ ವೀಸಾ ಕಚೇರಿಯ ಟಿವಿ ಸ್ಕ್ರೀನ್ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದು, ಇದರಿಂದ ಕಚೇರಿಯಲ್ಲಿ ಕ್ಯೂನಲ್ಲಿ ನಿಂತಿದ್ದ ಜನತೆ ಆಘಾತಕ್ಕೊಳಗಾಗಿದ್ದಾರೆ. ಪಾಕ್ನ ಯುಕೆ ವೀಸಾ ಕಚೇರಿಯ ಅಧಿಕೃತ ಆವರಣದಲ್ಲಿರುವ ಟಿವಿ ಪರದೆಯೊಂದರಲ್ಲಿ ಇದು ಪ್ರಸಾರವಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೀಸಾ ಕಚೇರಿಯಲ್ಲಿ ಜನರು ತಮ್ಮ ದಾಖಲೆಗಳೊಂದಿಗೆ ಸರತಿ ಸಾಲಿನಲ್ಲಿ ನಿಂತಿರುವಾಗ ಗೆರ್ರಿಯ ವೀಸಾ ಕೇಂದ್ರ ಆಕಸ್ಮಿಕವಾಗಿ ದೊಡ್ಡ ಪರದೆಯ ಮೇಲೆ ವಯಸ್ಕರ ವಿಡಿಯೋ ಪ್ರದರ್ಶಿಸಿದೆ. ಈ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದ್ದು, ದೃಶ್ಯಾವಳಿ ಇದೀಗ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಕರಾಚಿಯ ವೀಸಾ ಕಚೇರಿಯಲ್ಲಿದ್ದ ಜನರು ತಮ್ಮ ಪ್ರಯಾಣದ ಕಾರ್ಯವಿಧಾನವನ್ನು ಮಾಡಲು ಆಗಮಿಸಿದ ದೃಶ್ಯಗಳನ್ನು ವಿಡಿಯೋ ಆರಂಭದಲ್ಲಿ ತೋರಿಸುತ್ತದೆ.
ಬಳಿಕ, ಸಾರ್ವಜನಿಕ ದೂರದರ್ಶನದಲ್ಲಿ ಬರುತ್ತಿರುವ ವಿಡಿಯೋವನ್ನು ಹೈಲೈಟ್ ಮಾಡಲು ಕ್ಯಾಮರಾ ಜೂಮ್ ಮಾಡಿದೆ. ಅಲ್ಲಿ ತಪ್ಪಾಗಿ ದೊಡ್ಡ ಸ್ಕ್ರೀನ್ ಮೇಲೆ ಪೋರ್ನ್ ವಿಡಿಯೋ ತೋರಿಸಿದೆ. ಮಹಿಳೆಯರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಜನರ ಸಮ್ಮುಖದಲ್ಲಿ ಪರದೆಯ ಮೇಲೆ ಕಾಣಿಸಿಕೊಂಡಿತು. ಸ್ವಲ್ಪ ಸಮಯದ ನಂತರ, ಕಚೇರಿಯ ಸಿಬ್ಬಂದಿ ಅದನ್ನು ಗಮನಿಸಿ ಟಿವಿ ಸ್ವಿಚ್ ಆಫ್ ಮಾಡಿದ್ದಾರೆ.