ಬೀಟ್ ರೋಟ್ ನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇರುತ್ತದೆ. ಪೊಟ್ಯಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಈಗಾಗಲೇ ಲೋ ಬಿಪಿ ಸಮಸ್ಯೆ ಇರುವವರು ಬೀಟ್ ರೋಟ್ ಅನ್ನು ಸೇವಿಸಿದರೆ ರಕ್ತದೊತ್ತಡ ಕಡಿಮೆಯಾಗಿ ತಲೆ ತಿರುಗುವಿಕೆ, ಆಯಾಸ ಮುಂತಾದ ಸಮಸ್ಯೆ ಕಾಡುತ್ತದೆ.
ಬೀಟ್ ರೋಟ್ ನಲ್ಲಿ ಆಕ್ಸಲೇಟ್ ಅಂಶವಿದೆ. ಇದು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವವರು ಬೀಟ್ ರೋಟ್ ಸೇವಿಸಬೇಡಿ. ಅಲ್ಲದೇ ಬೀಟ್ ರೋಟ್ ಲಿವರ್ ನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಹಾಗಾಗಿ ಲಿವರ್ ಗೆ ಸಂಬಂಧಿಸಿದ ಸಮಸ್ಯೆ ಇರುವವರು ಬೀಟ್ ರೋಟ್ ನಿಂದ ದೂರವಿರಿ.