ಕೋಲಾರ:- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಶುರುವಾಗಿದೆ.
Lokasabha Election: ಕೈ ಕೊಟ್ಟ ಮತಯಂತ್ರ.. ಕಾದು-ಕಾದು ಸುಸ್ತಾದ ಮತದಾರರು!
ಹೀಗಾಗಲೇ ಕೋಲಾರದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಕೋಲಾರ ಜಿಲ್ಲೆಯ 2060 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಈ ಹಿನ್ನೆಲೆ ಕೋಲಾರ ತಾಲ್ಲೂಕು ಕುಂಬಾರಹಳ್ಳಿ ಗ್ರಾಮದಲ್ಲಿ ಮತದಾನಕ್ಕೆ ಮತದಾರರು ಕ್ಯೂ ನಿಂತಿದ್ದಾರೆ. ಮತಗಟ್ಟೆ ಸಂಖ್ಯೆ 95 ರಲ್ಲಿ ಮತದಾನ ಮಾಡಲು ಜನರು ಉತ್ಸಾಹ ತೋರಿದ್ದಾರೆ.
ಇನ್ನೂ ಕೋಲಾರದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಸಖಿ ಬೂತ್ ನಿರ್ಮಾಣ ಮಾಡಲಾಗಿದ್ದು, ಕೋಲಾರದ ಮಹಿಳಾ ಸಮಾಜದ 116 ಮತಗಟ್ಟೆಯಲ್ಲಿ ನಿರ್ಮಾಣ ಮಾಡಲಾಗಿದೆ. ಮಹಿಳೆಯರನ್ನು ಆಕರ್ಷಿಸಲು ಪಿಂಕ್ ಬೂತ್ ಗಳ ನಿರ್ಮಾಣ ಮಾಡಲಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ.