Lokasabha Election: ಕೈ ಕೊಟ್ಟ ಮತಯಂತ್ರ.. ಕಾದು-ಕಾದು ಸುಸ್ತಾದ ಮತದಾರರು!

ತುಮಕೂರು:– ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಇದೇ ಹೊತ್ತಲ್ಲೇ ಮತಯಂತ್ರ ಕೈಕೊಟ್ಟಿದೆ. KR Pura: ವರ್ತೂರಿನಲ್ಲಿ ಚುರುಕುಗೊಂಡ ಮತದಾನ: ಸರದಿ ಸಾಲಲ್ಲಿ ನಿಂತು ಹಕ್ಕು ಚಲಾಯಿಸುತ್ತಿರುವ ಜನ! ತುಮಕೂರು ನಗರದಲ್ಲಿ ಮತಯಂತ್ರ ಕೈ ಕೊಟ್ಟಿದೆ. ತುಮಕೂರು ನಗರದ ಮತಗಟ್ಟೆ ಸಂಖ್ಯೆ 66ರಲ್ಲಿ ಘಟನೆ ಜರುಗಿದೆ. ಮತದಾನವಾಗಿ ಅರ್ಧಗಂಟೆ ಕಳೆದರು ದೋಷ ನಿವಾರಣೆಯಾಗಿಲ್ಲ. ಹಕ್ಕು ಚಲಾವಣೆಗೆ ಸರತಿ ಸಾಲಿನಲ್ಲಿ ಮತದಾರರು ನಿಂತಿದ್ದಾರೆ. ಮತಯಂತ್ರ ಸರಿಪಡಿಸಲು ಪರದಾಟ ನಡೆಸಿದ ದೃಶ್ಯ ಸೆರೆಯಾಗಿದೆ.