ಯಾವ್ಯಾವ ರೀತಿಯಲ್ಲಿ ಕಳ್ಳರು ಇರುತ್ತಾರೆ ಎಂದು ಹೇಳೋಕೆ ಸಾಧ್ಯವಿಲ್ಲ. ಇಲ್ಲೊಬ್ಬ ಕಳ್ಳ ತಾನು ಟ್ರೀಟ್ ಮೆಂಟ್ ಪಡೆದುಕೊಳ್ಳುತ್ತಿದ್ದ ಆಸ್ಪತ್ರೆಯಿಂದ ಮಧ್ಯರಾತ್ರಿ ಅಂಬ್ಯುಲೆನ್ಸ್ ಕದ್ದು ಪರಾರಿಯಾಗಿದ್ದಾನೆ. ಅಂದ ಹಾಗೆ ಈ ಘಟನೆ ನಡೆದಿರುವುದು ಅಮೆರಿಕದ ವರ್ಜೀನಿಯಾದಲ್ಲಿ.
32 ವರ್ಷದ ರಿಕಿ ಲೆವೆ ಚಿಕಿತ್ಸೆ ಮಧ್ಯೆಯೇ ಎದ್ದು ಆಸ್ಪತ್ರೆಯ ಅಂಬ್ಯುಲೆನ್ಸ್ ಕದ್ದು ಪರಾರಿಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸದ್ಯ ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ರಿಕಿ ಲೆವೆ ರೋಗಿಗಳ ಬಟ್ಟೆಗಳನ್ನ ಧರಿಸಿದ್ದು, ಕೈಯಲ್ಲಿ ಐವಿ ಇತ್ತು ಎಂಬುದು ಸಿಸಿಟಿವಿಯಲ್ಲಿ ಗೊತ್ತಾಗಿದೆ. ಫೇರ್ಫಾಕ್ಸ್ ಕೌಂಟಿ ಪೊಲೀಸ್ ಇಲಾಖೆ ಆಸ್ಪತ್ರೆಯ ಹೊರಗೆ ತೆಗೆದ ಶಂಕಿತನ ಫೋಟೋವನ್ನು ಹಂಚಿಕೊಂಡಿದ್ದು, “ಆತ ಇನ್ನೂ ಡಿಸ್ಚಾರ್ಜ್ ಆಗಿರಲಿಲ್ಲ. ಆತನ ಕೈಯಲ್ಲಿ ಐವಿ ಇದ್ದು, ಚಿಕಿತ್ಸೆ ನಡೆಯುತ್ತಿತ್ತು” ಎಂದು ತಿಳಿಸಿದ್ದಾರೆ.