ಈಗಿನ ಕಾಲದಲ್ಲಿ ಎಲ್ಲರೂ ಬಯಸುವುದು ಆರ್ಥಿಕ ಯಶಸ್ಸು ಮತ್ತು ಆರ್ಥಿಕ ಭದ್ರತೆ. ಪ್ರತಿಯೊಬ್ಬರೂ ಆ ಒಂದು ಗುರಿಯತ್ತ ಗಮನಾರ್ಹ ಪ್ರಯತ್ನವನ್ನು ಮಾಡಲು ಸಿದ್ಧರಿದ್ದಾರೆ. ಆದರೂ, ಸಾಂದರ್ಭಿಕವಾಗಿ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯ ಜೊತೆಗೆ ಅದೃಷ್ಟವೂ ಬೇಕಾಗುತ್ತದೆ. ಕೆಲವು ಅದೃಷ್ಟದ ಚಿಹ್ನೆಗಳು ನಿಮಗೆ ನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯಲು ಸಹಾಯ ಮಾಡಬಹುದು.
Hubballi: ಯಲ್ಲಮ್ಮನ ಗುಡ್ಡಕ್ಕೆ NWKRTC ಯಿಂದ ಜಾತ್ರೆ ವಿಶೇಷ ಬಸ್ ವ್ಯವಸ್ಥೆ!
ಧರ್ಮಗ್ರಂಥಗಳ ಪ್ರಕಾರ ಅಂಗೈ ತುರಿಕೆಯು ನೀವು ಹಣವನ್ನು ಗಳಿಕೆ ಅಥವಾ ನಷ್ಟವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ವಿಷಯದಲ್ಲಿ ಪುರುಷರ ಮತ್ತು ಮಹಿಳೆಯರ ಕೈಗಳು ವಿಭಿನ್ನವಾಗಿವೆ.
ಭಾರತೀಯ ಶಾಸ್ತ್ರಗಳನ್ನು ತಿಳಿದುಕೊಳ್ಳುವುದರ ಮೂಲಕ ಅಂಗೈ ತುರಿಕೆಯ ಬಗ್ಗೆ ಬಹಳಷ್ಟು ಕಲಿಯಬಹುದು. ಅದರಲ್ಲೂ ಪುರುಷರಿಗೆ, ಸ್ತ್ರೀಯರಿಗೆ ಬೇರೆ ಬೇರೆ ರೀತಿಯ ಅದೃಷ್ಟ ಇದರಲ್ಲಿದೆ ಅಂತೆ.
ಕೈಯಲ್ಲಿ ಎಂದರೆ ಅಂಗೈಯಲ್ಲಿ ಉಂಟಾಗುವ ತುರಿಕೆಯು ನೀವು ಹಣವನ್ನು ಗಳಿಸುತ್ತೀರಿ ಅಥವಾ ಕಳೆದು ಕೊಳ್ಳುತ್ತೀರಿ ಎಂಬುದರ ಸಂಕೇತವಾಗಿದೆ ಎಂದು ಹೇಳಾಗುತ್ತೆ. ಪುರುಷರಿಗೆ, ಅವರ ಬಲಗೈ ತುರಿಕೆಯಾದರೆ, ಅದು ಒಳ್ಳೆಯ ಸುದ್ದಿ ಎಂದರ್ಥ ಎಂದು ಶಾಸ್ತ್ರ ಹೇಳುತ್ತಂತೆ. ಕಳೆದುಹೋದ ಹಣವನ್ನು ಹುಡುಕಬಹುದು ಎಂಬ ವರದಿಗಳೂ ಇವೆ.
ಪುರುಷರಿಗೆ, ಎಡಗೈ ಅಂಗೈ ತುರಿಕೆಯಾದರೆ, ಹಣದ ನಷ್ಟವನ್ನು ಅನುಭವಿಸಬಹುದು ಎಂದು ಶಾಸ್ತ್ರ ಹೇಳುತ್ತದೆ. ನೀವು ಪುರುಷರಾಗಿದ್ದರೆ ಮತ್ತು ನಿಮ್ಮ ಎಡಗೈ ಆಗಾಗ್ಗೆ ತುರಿಕೆಯಾಗುತ್ತಿದ್ದರೆ ಏನೋ ಹಣ ಕಳೆದುಕೊಳ್ಳುವ ಮುನ್ಸೂಚನೆ ಎನ್ನಲಾಗಿದೆ.
ಆದರೆ ಮಹಿಳೆಯರಿಗೆ ಹಾಗಲ್ಲ ಮಹಿಳೆ ತನ್ನ ಎಡ ಅಂಗೈಯನ್ನು ತುರಿಸಿಕೊಳ್ಳುವ ಸಂಕೇತವೆಂದರೆ ಅವರು ಆರ್ಥಿಕವಾಗಿ ಯಶಸ್ವಿಯಾಗುತ್ತಾರೆ. ಸಂಪತ್ತನ್ನು ತರುತ್ತದೆ ಎಂದು ಭಾವಿಸಲಾಗಿದೆ. ನಿಮ್ಮ ಎಡಗೈಯಲ್ಲಿ ತುರಿಕೆ ಇದ್ದರೆ, ನೀವು ಹಣವನ್ನು ಗಳಿಸಲಿದ್ದೀರಿ ಎಂದರ್ಥ. ಇದು ಅದೃಷ್ಟದ ಕಡೆಗೆ ಬೊಟ್ಟು ಮಾಡುತ್ತದೆ. ಹಣವು ಒಂದಲ್ಲ ಒಂದು ರೀತಿಯಲ್ಲಿ ನಿಮ್ಮನ್ನು ಬಂದು ತಲುಪುತ್ತದೆ
ಆದರೆ ಮಹಿಳೆಯರ ವಿಚಾರದಲ್ಲಿ ಹಿಂದೂ ಧರ್ಮದ ಪ್ರಕಾರ, ಲಕ್ಷ್ಮಿ ದೇವಿಯು ಸಂಪತ್ತು, ಫಲವತ್ತತೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತಾಳೆ. ಆದ್ದರಿಂದ, ಎಡ ಅಂಗೈ ತುರಿಕೆಯಾದಾಗ, ದೇವಿಯು ಒಲಿದಿದ್ದಾಳೆ ಎಂಬುದು ಇದೆ ಎನ್ನಲಾಗಿದೆ.
ಇನ್ನೂ ಮಹಿಳೆಯರಿಗೆ ಬಲಗೈ ತುರಿಕೆ ಆದರೆ ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ ಎಂದು ಇದು ಸೂಚಿಸುತ್ತದೆ. ಇನ್ನೂ ಎರಡೂ ಕೈ ತುರಿಸಿದರೆ ನೀವು ಜಗತ್ತಿಗೆ ಸಮಾನವಾದ ಫಲವನ್ನು ಪಡೆಯುತ್ತೀರಿ ಮತ್ತು ನೀಡುತ್ತೀರಿ ಎಂಬ ಅರ್ಥವೂ ಇದೆ. . ನಿಮ್ಮ ಕೈಗಳಲ್ಲಿ ಪದೇ ಪದೇ ತುರಿಕೆ ನಿಮ್ಮ ಅದೃಷ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದೂ ಇದೆ.
ಮೊದಲಿನಿಂದಲೂ ಎಂದರೆ ತುಂಬಾ ಹಳೆಯ ಒಂದು ನಂಬಿಕೆಯಲ್ಲಿ ಅಂಗೈಯಲ್ಲಿ ತುರಿಕೆ ಉಂಟಾದರೆ ಹಣ ಬರುವ ಸಾಧ್ಯತೆಗಳಿವೆ ಅಂತ ಹೇಳಲಾಗುತ್ತದೆ. ಕೆಲವು ಅದೃಷ್ಟದ ಚಿಹ್ನೆಗಳು ನಿಮಗೆ ನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯಲು ಸಹಾಯ ಮಾಡಬಹುದು