ಇಸ್ಲಾಮಾಬಾದ್: “ಪ್ಯಾಲೆಸ್ತೀನ್” ಎಂದು ಬರೆದಿದ್ದ ಬ್ಯಾಗ್ ಹಿಡಿದು ಸೋಮವಾರ ಸಂಸತ್ತಿಗೆ ಆಗಮಿಸಿದ್ದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಡೆಯನ್ನು ಪಾಕಿಸ್ತಾನದ ರಾಜಕಾರಣಿ ಫವಾದ್ ಚೌಧರಿ ಶ್ಲಾಘಿಸಿದ್ದಾರೆ.
ಮಾಜಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಫವಾದ್ ಚೌಧರಿ ಅವರು ತಮ್ಮ ಪಾಕಿಸ್ತಾನಿ ರಾಜಕಾರಣಿಗಳು “ಅಂತಹ ಧೈರ್ಯವನ್ನು ಪ್ರದರ್ಶಿಸಲಿಲ್ಲ” ಎಂದು ಟೀಕಿಸಿದ್ದಾರೆ.
“ಜವಾಹರಲಾಲ್ ನೆಹರೂ ಅವರಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗಳಿಂದ ನಾವು ಇನ್ನೇನು ನಿರೀಕ್ಷಿಸಬಹುದು? ಪ್ರಿಯಾಂಕಾ ಗಾಂಧಿ ಹಂದಿಗಳ ನಡುವೆ ಅತಿ ಎತ್ತರದಲ್ಲಿ ನಿಂತಿದ್ದಾರೆ. ಇದು ಪಾಕಿಸ್ತಾನಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಇಲ್ಲಿಯವರೆಗೆ ಪಾಕಿಸ್ತಾನದ ಯಾವುದೇ ಸಂಸದರು ಅಂತಹ ಧೈರ್ಯವನ್ನು ಪ್ರದರ್ಶಿಸಿಲ್ಲ” ಎಂದು ಚೌಧರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ಯಾಲೆಸ್ತೀನ್ ಜನತೆಗೆ ಬೆಂಬಲ ಸೂಚಿಸುವ ಸಲುವಾಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಸಂಸತ್ತಿಗೆ ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ಹಿಡಿದು ಆಗಮಿಸಿದ್ದರು.