ಶಿವಮೊಗ್ಗ: ಬಿಜೆಪಿಯವರನ್ನು ಬೈದರೆ ಮಾತ್ರ ಕಾಂಗ್ರೆಸ್ ಶಾಸಕರಿಗೆ ರಾಜಕೀಯ ಸ್ಥಾನಮಾನಗಳು ಸಿಗುವುದೆಂಬ ಭಾವನೆ ಬೇಳೂರಿಗೆ ಇರಬೇಕು ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕುಟುಕಿದ್ದಾರೆ. ಸಂಸದ ರಾಘವೇಂದ್ರ ಅವರು ಚುನಾವಣಾ ಸಮಯದಲ್ಲಿ ಮಾತ್ರ ಜಿಲ್ಲಾ ಪ್ರವಾಸ ಮಾಡುತ್ತಾರೆ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಗೋಪಾಲಕೃಷ್ಣ ಗೌರವಾನ್ವಿತ, ಸೀನಿಯರ್ ಎಂಎಲ್ ಎ ಆಗಿದ್ದಾರೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಮಂತ್ರಿ ಆಗಬೇಕು, ನಿಗಮ ಮಂಡಳಿ ಅಧ್ಯಕ್ಷ ಆಗಬೇಕು ಅನ್ನೋ ಆಸೆ ಇದೆ. ವಿಪಕ್ಷಗಳಿಗೆ ಯಾರು ಹೆಚ್ಚು ಬೈಯ್ತಾರೋ ಅದರ ಮೇಲೆ ಪ್ರಮೋಷನ್ ಸಿಗುತ್ತೆ ಇರಬೇಕು. ಹಾಗಾಗಿ ಈ ತರಹದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ನನ್ನ ಮೇಲೆ ನನ್ನ ಕ್ಷೇತ್ರದ ಜನ ವಿಶ್ವಾಸ ಇಟ್ಟಿದ್ದಾರೆ. ಅವರಿಗೆ ಮಾತ್ರ ನಾನು ಉತ್ತರದಾಯಿ. ಇಷ್ಟು ವರ್ಷ ನನಗೆ ಹಾರೈಸಿದ್ದಾರೆ. ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಹಾಗಾಗಿ ಅವರಿಗೆ ಮಾತ್ರ ನಾನು ಉತ್ತರ ನೀಡಬೇಕು ಎಂದು ತಿಳಿಸಿದರು.