ಬೆಂಗಳೂರು: ಸೋಮಶೇಖರ್ ಪಕ್ಷದಿಂದ ಹೊರ ಹೋಗಲಿ ಎಂದು ಹೇಳಿಲ್ಲ. ಹಾಗೇ ಹೇಳಲು ನಾನ್ಯಾರು? ಅನೇಕರು ಜಾಮೂನು ತಿಂದಿದ್ದಾರೆ, ವಿಷ ಕುಡಿದವರು ಇದ್ದಾರಾ? ಜಾಮೂನು ತಿಂದು ಮಂತ್ರಿಗಳಾಗಿದ್ದರು. ಮತ್ತೆ ನಮ್ಮ ಸರ್ಕಾರ ಬಂದಿದ್ದರೆ ಅವರು ಈ ಮಾತು ಹೇಳುತ್ತಿದ್ರಾ? ಶಾಸಕ ಎಸ್.ಟಿ.ಸೋಮಶೇಖರ್ ಟೀಕಿಸೋದು ನನ್ನ ಉದ್ದೇಶ ಅಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ ವಿಚಾರ ಬಗ್ಗೆ ಮಾತನಾಡಿದ ಅವರು ಯಾವುದೇ ಒಬ್ಬ ವ್ಯಕ್ತಿಯಿಂದ ಬಿಜೆಪಿ ನಿಂತಿಲ್ಲ ಜಯಪ್ರಕಾಶ್ ಹೆಗ್ಡೆ ಇನ್ನೂ ಬೇರೆ ಕಡೆ ಹೋಗಿಲ್ಲ, ಹೋಗುತ್ತಾರಾ ಅಂತಾ ಗೊತ್ತಿಲ್ಲಇವತ್ತಿನವರೆಗೂ ಅವರು ಪಕ್ಷದ ವಿರುದ್ಧ ಒಂದೂ ಮಾತಾಡಿಲ್ಲ ಎಂದರು.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಮಹಾರಾಷ್ಟ್ರ ಬಿಜೆಪಿ ನಾಯಕರ ಮೂಲಕ ಕಾಂಗ್ರೆಸ್ ಶಾಸಕರ ಸಂಪರ್ಕ ವಿಚಾರ ಬಗ್ಗೆಯೂ ಮಾತನಾಡಿ ನನಗೆ ಅದು ಗೊತ್ತಿಲ್ಲಪ್ಪ ಮಹಾರಾಷ್ಟ್ರದಲ್ಲಿ ನಾವು ಗ್ರಾ.ಪಂ. ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಮಗ್ಗುಲು ಮುರಿದಿದ್ದೇವೆ ನಾನು ಓಬಿಸಿ ಅಷ್ಟೇ ಅಲ್ಲ, ನಾನು ಹಿಂದುತ್ವವಾದಿ ಬರೀ ಒಬಿಸಿ, ದಲಿತರು ಅಂತಾ ಸಿದ್ದರಾಮಯ್ಯ ನಾಟಕ ಮಾಡಿದ ಹಾಗೆ ನಾವು ನಾಟಕ ಮಾಡಲು ದೆಹಲಿಯಲ್ಲಿ ಸಭೆ ಸೇರಿಲ್ಲ ಬರೀ ಒಬಿಸಿ, ದಲಿತರು, ಒಕ್ಕಲಿಗರು, ಲಿಂಗಾಯತರು ಮಾತ್ರ ಉದ್ದಾರ ಆಗಬಾರದು ಇಡೀ ಭಾರತೀಯರು ಉದ್ದಾರ ಆಗುವಂತಹ ಮೀಸಲಾತಿ ನೀತಿ ಬಿಜೆಪಿಯಿಂದ ಆಗುತ್ತದೆ ಜಾತಿ ಸಮೀಕ್ಷೆ ಬಂದಾಗ ಸಿದ್ದರಾಮಯ್ಯ ರೀತಿ ಬರೀ ಒಬಿಸಿ, ದಲಿತರು ಅಂತಾ ನಾವು ನಾಟಕ ಮಾಡಲ್ಲ ಎಂದು ಹೇಳಿದರು.