ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಬ್ಬರಾದ ಮೇಲೊಬ್ಬರಂತೆ ನಟ, ನಟಿಯರ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಖ್ಯಾತ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಸಿರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಗಿಣಿರಾಮ ಧಾರವಾಹಿಯ ಮೂಲಕ ಖ್ಯಾತಿ ಘಳಿಸಿದ ನಟಿ ನಯನಾ ನಾಗರಾಜ್ ಹೊಸ ಬಾಳಿಗೆ ಅಣಿಇಟ್ಟಿದ್ದಾರೆ.
ಕೆಲ ತಿಂಗಳ ಹಿಂದೆ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ನಯನಾ ನಾಗರಾಜ್ ತಮ್ಮ ಬಹುಕಾಲದ ಗೆಳೆಯ ಸುಹಾಸ್ ಶಿವಣ್ಣ ಜೊತೆ ಜೂನ್ 16 ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಯನಾ ನಾಗರಾಜ್ ಅವರು ‘ಪಾಪ ಪಾಂಡು’ ಹಾಗೂ ‘ಗಿಣಿರಾಮ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಗಿಣಿರಾಮ ಧಾರಾವಾಹಿಯ ಮಹತಿ ಶಿವರಾಮ್ ದೇಶಪಾಂಡೆ ಪಾತ್ರ ಅವರಿಗೆ ಹೆಚ್ಚಿನ ಹೆಸರು ಹಾಗೂ ಜನಪ್ರಿಯತೆ ತಂದುಕೊಟ್ಟಿತು. ನಟನೆಯ ಜೊತೆಗೆ ನಯನ ಉತ್ತಮ ಗಾಯಕಿಯಾಗಿಯೂ ಖ್ಯಾತಿ ಘಳಿಸಿದ್ದಾರೆ.
ಕಳೆದ 10 ವರ್ಷಗಳಿಂದ ನಯನ ಹಾಗೂ ಸುಹಾಸ್ ಪ್ರೀತಿಯಲ್ಲಿದ್ದರು. ಆದರೆ ಈ ಬಗ್ಗೆ ನಟಿ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಇದೀಗ ಇಬ್ಬರು ಕುಟುಂಬಸ್ಥರ ಒಪ್ಪಿಗೆ ಪಡೆದ ಜೋಡಿಗಳು ಸಿಂಪಲ್ ಆಗಿ ಹಸೆಮಣೆ ಏರಿದ್ದಾರೆ.
ಸುಹಾಸ್ ಶಿವಣ್ಣ ಕೂಡ ರಂಗಭೂಮಿಯಲ್ಲಿ ಗುರುತಿಸಿಕೊಂಡವರು. ಇವರಿಬ್ಬರು ಹಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ನಯನ, ಸುಹಾಸ್ ಜೋಡಿಯ ಮದುವೆಗೆ ಗಿಣಿರಾಮ ಸೀರಿಯಲ್ ನಲ್ಲಿ ಮಹತಿಗೆ ಜೋಡಿಯಾಗಿದ್ದ ಶಿವರಾಂ ಆಲಿಯಾಸ್ ರಿತ್ವಿಕ್ ಮಠದ್ ದಂಪತಿ, ನಟ ಸಿಹಿ ಕಹಿ ಚಂದ್ರು ಕುಟುಂಬ, ಚಂದನ ಅನಂತಕೃಷ್ಣ ಮುಂತಾದವರು ಆಗಮಿಸಿ ಶುಭ ಹಾರೈಸಿದ್ದಾರೆ.