ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಳೆದ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆ ಬಳಿಕ ಸಾಕಷ್ಟು ಪ್ರಕ್ರಿಯೆಗಳು ನಡೆದಿವೆ. ಇದೀಗ ಮಂಗಳವಾರ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಪಿಎಂಎಲ್- ಎನ್ (ಪಾಕಿಸ್ತಾನ ಮುಸ್ಲಿಂ ಲೀಗ್ – ನವಾಜ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಸ್ಥಾನಕ್ಕೆ ಪಕ್ಷವು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ನಾಲ್ಕನೇ ಬಾರಿಗೆ ಪ್ರಧಾನಿ ಹುದ್ದೆಗೇರಲು ನವಾಜ್ ಷರೀಫ್ ಸಜ್ಜಾಗಿದ್ದರು. ಆದರೆ ತಡ ರಾತ್ರಿ ನಡೆದ ಬೆಳವಣಿಗೆಗಳು ವ್ಯತಿರಿಕ್ತವಾಗಿದ್ದು, ಪಿಪಿಪಿ, ಎಂಕ್ಯೂಎಂ ಸೇರಿದಂತೆ ಇತರೆ ಪಕ್ಷಗಳ ಬೆಂಬಲ ಪಡೆದು ಸಮ್ಮಿಶ್ರ ಸರಕಾರ ರಚನೆಗೆ ಶೆಹಬಾಜ್ ಷರೀಫ್ ಮುಂದಾಗಿದ್ದಾರೆ.
ಪಿಎಂಎನ್ಎಲ್ ಪಕ್ಷದಿಂದ ಪ್ರಧಾನಿ ಸ್ಥಾನಕ್ಕೆ ನವಾಜ್ ಷರೀಫ್ ಅವರ ಹೆಸರನ್ನು ಸೋದರ ಹಾಗೂ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಘೋಷಣೆ ಮಾಡಿದ್ದರು., ”ಹಳ್ಳಿ ತಪ್ಪಿರುವ ದೇಶದ ಅಭಿವೃದ್ಧಿಗೆ ಮರು ಜೀವ ನೀಡಲು ನವಾಜ್ ಅಗತ್ಯ,” ಎಂದು ಪ್ರತಿಪಾದಿಸಿದ್ದರು. ಆದರೆ ಶೆಹಬಾಜ್ ಅವರನ್ನೇ ಎರಡನೇ ಅವಧಿಗೆ ಪ್ರಧಾನಿಯನ್ನಾಗಿ ಮಾಡಲು ನವಾಜ್ ಹೆಸರು ಸೂಚಿಸಿದ್ದಾರೆ.