ಶಿವರಾಜ್ ಕುಮಾರ್ ನಟನೆಯ ವಜ್ರಕಾಯ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ನಭಾ ನಟೇಶ್ ಬಳಿಕ ನನ್ನನ್ನು ದೋಚುಕುಂದುವಟೆ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.
ಕನ್ನಡದಲ್ಲಿ ಒಂದೆರಡು ಸಿನಿಮಾ ಮಾಡಿ ಟಾಲಿವುಡ್ ಗೆ ಎಂಟ್ರಿಕೊಟ್ಟ ನಭಾ ನಟೇಶ್ ಗೆ ಖ್ಯಾತಿ ತಂದುಕೊಟ್ಟಿದ್ದು 2019ರಲ್ಲಿ ತೆರೆಕಂಡ ಪೂರಿ ಜಗನ್ನಾಥ್ ನಿರ್ದೇಶಕದ ಇಸ್ಮಾರ್ಟ್ ಶಂಕರ್ ಸಿನಿಮಾ.
ಸದ್ಯ ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಭಾ ನಟೇಶ್ ಈ ಮಧ್ಯೆ ಚಂದದ ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ನಟಿಯ ಲುಕ್, ಹೇರ್ ಸ್ಟೈಲ್ ಎಲ್ಲವು ಬದಲಾಗಿದ್ದು ಈಕೆಯನ್ನು ಹೊಸ ಅವತಾರದಲ್ಲಿ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಐಸ್ಮಾರ್ಟ್ ಶಂಕರ್ ಯಶಸ್ಸಿನ ನಂತರ, ನಭಾ ನಟೇಶ್ ಅವರು ರವಿತೇಜಾ ಅವರೊಂದಿಗೆ ಡಿಸ್ಕೋ ರಾಜಾ ಚಿತ್ರದಲ್ಲಿ ನಟಿಸಿದ್ದಾರೆ. ನಭಾ ಅವರು ತಮ್ಮ 19 ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ನಭಾ ನಟೇಶ್ ಯಶಸ್ಸಿನ ಹಾದಿಯಲ್ಲೇ ಸಾಗುತ್ತಿದ್ದಾರೆ.
2017ರಲ್ಲಿ ನಭಾ ಅವರು ಸುಮಂತ್ ಶೈಲೇಂದ್ರ ಅವರೊಂದಿಗೆ ಲೀ ಚಿತ್ರದಲ್ಲಿ ನಟಿಸಿದರು. ಅದೇ ವರ್ಷದಲ್ಲಿ ಅವರು ಸಾಹೇಬ ಚಿತ್ರದಲ್ಲಿ ವಿಶೇಷ ಗೀತೆಯಲ್ಲಿ ಕಾಣಿಸಿಕೊಂಡರು. ವಜ್ರಕಾಯದಲ್ಲಿ ನಭಾ ಅವರು ಅಭಿನಯ ಕನ್ನಡಿಗರ ಮನಸ್ಸು ಗೆದ್ದಿತ್ತು. ಅತ್ಯುತ್ತಮ ಮಹಿಳಾ ಚೊಚ್ಚಲ ಕನ್ನಡಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು.
ಸ್ಮಾರ್ಟ್ ಶಂಕರ್ ಚಿತ್ರದ ನಂತರ ಟಾಲಿವುಡ್ನಲ್ಲಿ ನಭಾ ಮಿಂಚಿದ್ರು. ನಿರ್ಮಾಪಕರು ಕೂಡ ನಭಾ ಡೇಟ್ಗಾಗಿ ಕಾಯುತ್ತಿದ್ದರು. ನಭಾ ನಟೇಶ್ ಈಗಾಗಲೇ ರವಿತೇಜ, ಬೆಲ್ಲಂಕೊಂಡ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರಿಗೆ ಜೋಡಿಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಭಾ ನಟೇಶ್ ಸಿನಿಮಾ ಅವಕಾಶಗಳಿಗಾಗಿ ಕಾಯ್ತಿದ್ದಾರೆ. ಅಲ್ಲದೆ ಮಹೇಶ್ ಬಾಬು, ಅಲ್ಲು ಅರ್ಜುನ್, ರಾಮ್ ಚರಣ್, ಪವನ್ ಕಲ್ಯಾಣ್, ಎನ್ಟಿಆರ್ ಮತ್ತು ಪ್ರಭಾಸ್ ಅವರಂತಹ ನಾಯಕರ ಎದುರು ನಟಿಸಲು ಕಾಯ್ತಿರುವುದಾಗಿ ನಭಾ ಹೇಳಿಕೊಂಡಿದ್ದಾರೆ.