ರಾಮನಗರ:– ರಾಮನಗರದಲ್ಲಿ ಒಂದು ವಿಚಿತ್ರ ಘಟನೆ ಜರುಗಿದ್ದು, ನನ್ನ ಪತಿ ಲೈಂಗಿಕ ಸುಖ ಕೊಡುತ್ತಿಲ್ಲ ಎಂದು ಹೆಂಡತಿ ಒಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಜರುಗಿದೆ.
ನನ್ನ ರಾಜಕೀಯ ಭವಿಷ್ಯ ಹಾಳಾಯ್ತು..! ಜಡ್ಜ್ ಮುಂದೆ ಬಿಕ್ಕಿ-ಬಿಕ್ಕಿ ಕಣ್ಣೀರು ಹಾಕಿದ ರೇವಣ್ಣ!
ಕಳೆದ ಎರಡು ವರ್ಷದಿಂದ ಪತಿ ನನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿಲ್ಲ. ವರದಕ್ಷಿಣೆಗಾಗಿಯೇ ಈ ರೀತಿ ಮಾಡುತ್ತಿದ್ದಾರೆ ಎಂದು ಪತ್ನಿ, ತನ್ನ ಪತಿ ವಿರುದ್ಧ ರಾಮನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಎರಡು ವರ್ಷದ ಗಂಡು ಮಗು ಇದೆ. ಮಗುವಿನ ಜನನ ಆದಾಗಿನಿಂದ ಲೈಂಗಿಕತೆಯಲ್ಲಿ ತೊಡಗಿಕೊಂಡಿಲ್ಲ. ಕಳೆದ ಎರಡು ವರ್ಷದಿಂದ ಪತಿ ತನ್ನೊಂದಿಗೆ ಸೆಕ್ಸ್ ಮಾಡುತ್ತಿಲ್ಲ. ವರದಕ್ಷಿಣೆಗಾಗಿಯೇ ಈ ರೀತಿ ಮಾಡುತ್ತಿದ್ದಾರೆ. ದಯವಿಟ್ಟು ವರದಕ್ಷಿಣೆ ಕೇಸ್ ಹಾಕಿ ಎಂದು ಮಹಿಳೆ ದೂರು ನೀಡಿದ್ದು, ಈ ದೂರಿನ ಮೇರೆಗೆ ರಾಮನಗರ ಮಹಿಳಾ ಠಾಣೆ ಪೊಲೀಸರು, ವರದಕ್ಷಿಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)