ಧಾರವಾಡ : ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮುತ್ತಗಿ ಹತ್ತಿರದಲ್ಲಿರುವ ಹಳ್ಳದ ಸೇತುವೆ ಕಾಮಗಾರಿಗೆ ಚಾಲನೆ ನೀಡಿದರು. ಅಂದಾಜು ಮೊತ್ತ 13.85 ಕೋಟಿ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ತಾಲೂಕಿನ ಜಿ.ಬಸನಕೊಪ್ಪ ಗ್ರಾಮದಿಂದ ಕಳಸನಕೊಪ್ಪ ಗಳಗಿಹುಲಕೊಪ್ಪ ರಸ್ತೆ ನಿರ್ಮಾಣ ಕಾಮಗಾರಿ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಮುಖ್ಯಮಂತ್ರಿ ವಿಶೇಷ ಅನುದಾನದಡಿಯಲ್ಲಿ ನೀರಸಾಗರ ಕನ್ಯನಾಯಕನಕೊಪ್ಪ ಹಾಗೂ ಡೊಂಬ್ರಿಕೊಪ್ಪ ಗ್ರಾಮಗಳ ರಸ್ತೆ ನಿರ್ಮಾಣ ಕಾಮಗಾರಿ, ಸಣ್ಣ ನೀರಾವರಿ ಇಲಾಖೆಯಿಂದ ಜಿಬಸವನಕೊಪ್ಪ ಮತ್ತು ನೀರಸಾಗರ ಮಧ್ಯ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ಮುತ್ತಗಿಯಿಂದ ಹಿರೆಹೊನ್ನಿಹಳ್ಳಿಗೆ ಹೋಗುವ ರಸ್ತೆಯ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.