ಬೆಂಗಳೂರು: ನಗರದಲ್ಲಿ ಹಿಟ್ ಅಂಡ್ ರನ್ ಗೆ ವ್ಯಕ್ತಿ ಬಲಿಯಾಗಿರುವ ಘಟನೆ ಆನಂದರಾವ್ ಸರ್ಕಲ್ ಬಳಿಯ ಫೈಓವರ್ ನಲ್ಲಿ ನಡೆದಿದೆ.
ರಾತ್ರಿ 9.30ರ ಸುಮಾರಿಗೆ ನಡೆದಿದ್ದು ಫೈಓವರ್ ಮೇಲೆ ನಡೆದು ಹೋಗುತಿದ್ದ ವ್ಯಕ್ತಿಗೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಸುಮಾರು 20 ಮೀಟರ್ ನಷ್ಟು ದೂರ ವ್ಯಕ್ತಿಯ ದೇಹ ಎಳೆದೊಯ್ದ ವಾಹನ ಘಟನೆಯಲ್ಲಿ ಅಂದಾಜು 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿ ಸಾವು
ಬೆಂಗಳೂರಿನಲ್ಲಿ ಹೆಚ್ಚಾಯ್ತು RX ಬೈಕ್ ಕಳ್ಳರ ಹಾವಳಿ: ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಉಪ್ಪಾರ್ ಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಉಪ್ಪಾರ್ ಪೇಟೆ ಸಂಚಾರಿ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದು ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.