ಬೆಂಗಳೂರು: ಪಶು ಆಹಾರ ತಯಾರಿಸುವ ಕುರಿತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ KMFನ ಆಹಾರ ಘಟಕಗಳು ಆರು ಕಡೆ ಇದೆ. ಪಶು ಆಹಾರ ತಯಾರಿಸಲು ಮೆಕ್ಕೆಜೋಳ ಬೇಕು. ಮೆಕ್ಕೆಜೋಳದ SSP 2,090 ರೂಪಾಯಿ ಇದೆ. ಇದಕ್ಕೆ ನಾವು 160 ರೂ. ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ನವೆಂಬರ್ 13ನೇ ತಾರೀಖಿನಿಂದ ಮೆಕ್ಕೆಜೋಳ ಖರೀದಿ ಆರಂಭ ಮಾಡಲಿದ್ದು ರೈತರಿಂದ 2250 ರೂ.ಗೆ ಮೆಕ್ಕೆಜೋಳ ಖರೀದಿ ಮಾಡುತ್ತಿದ್ದೆವೆ. ಒಟ್ಟು ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡುತ್ತೇವೆ.
DK Sivakumar: ಗುಡ್ ನ್ಯೂಸ್: ನೇರಳೆ ಮಾರ್ಗ ಮೆಟ್ರೋ ರೈಲು ಬಿಡದಿವರೆಗೆ ವಿಸ್ತರಣೆ – ಡಿ.ಕೆ.ಶಿವಕುಮಾರ್ ಘೋಷಣೆ
ರಾಜ್ಯದಲ್ಲಿ ಇಷ್ಟು ದಿನ ಬರ ಇತ್ತು. ಆದರೇ, ಕಳೆದ ವಾರದಿಂದ ಕೆಲವು ಕಡೆ ಮಳೆ ಆಗುತ್ತಿದೆ. ಇದರಿಂದ ಮೇವು ಕೂಡ ಹೆಚ್ಚಾಗುವ ನಿರೀಕ್ಷೆ ಇದೆ. ಈಗ ಸದ್ಯ 6-7 ತಿಂಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ. ಹಾಲಿನ ದರ ಏರಿಕೆ ಮಾಡುವಂತೆ ಒತ್ತಾಯ ಇದೆ ಎಂದು ಅವರು ಹೇಳಿದರು.