ಹಿರಿಯ ನಟಿ ಲೀಲಾವತಿ (Leelvathi) ನಿಧನಕ್ಕೆ ನಟ ಶಿವರಾಜ್ ಕುಮಾರ್ (Shivarajkumar) ಅವರು ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರ ನಿಧನ ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ಅಮ್ಮ ಮತ್ತು ಮಗನ ಬಾಂಧವ್ಯವೇ ಬೇರೆ ತರಹ ಇತ್ತು ಎಂದು ಶಿವಣ್ಣ ಭಾವುಕರಾಗಿದ್ದಾರೆ. ಕಳೆದ ವಾರ ಲೀಲಾವತಿ ಅಮ್ಮನವರನ್ನ ಮಾತನಾಡಿಸಿದೆ.
ಅವರ ನಿಧನದಿಂದ ನಮ್ಮ ಚಿತ್ರರಂಗಕ್ಕೆ ನಷ್ಟ ಆಗಿದೆ. ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ. ವಿನೋದ್ ಯಾವಾಗಲೂ ಹೇಳುತ್ತಿದ್ದರು ಅವರ ಆರೋಗ್ಯದ ಬಗ್ಗೆ ನಾವೆಲ್ಲಾ ಅವರ ಜೊತೆಗೆ ಇರುತ್ತೀವಿ ಎಂದು ಹೇಳಿದ್ದೆ, ಲೀಲಾವತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಿವಣ್ಣ ಮಾತನಾಡಿದ್ದಾರೆ.
ಲೀಲಾವತಿ ಅಮ್ಮನ ವಿನೋದ್ ತುಂಬಾ ಹಚ್ಚಿಕೊಂಡಿದ್ದರು. ಅವರಿಬ್ಬರ ಬಾಂಧವ್ಯವೇ ಬೇರೇ ತರಹ ಇತ್ತು. ಈಗ ಅದೆನ್ನೆಲ್ಲಾ ಯೋಚನೆ ಮಾಡಿದಾಗ ಬೇಜಾರಾಗುತ್ತದೆ. ವಿನೋದ್ ಹೇಗೆ ತೆಗೆದುಕೊಳ್ತಾರೋ ಅನಿಸುತ್ತಿದೆ. ವಿನೋದ್ ತಾಯಿನ ಕಳೆದುಕೊಂಡ ನೋವಿನಲ್ಲಿದ್ದಾರೆ. ಇದೆಲ್ಲಾ ಸರಿ ಹೋಗಲಿ ಮತ್ತೆ ವಿನೋದ್ ಅವರನ್ನ ಭೇಟಿ ಮಾಡುತ್ತೇವೆ ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.