ಅಪಾರ ಅಭಿಮಾನಿಗಳನ್ನು ಹೊಂದಿರುವ 2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಕೊನೆಯ ಸ್ಥಾನ ಪಡೆದಿದೆ. ಈ ಸಮಯದಲ್ಲೇ ಆರ್ಸಿಬಿ ತಂಡದಿಂದ ವಿರಾಟ್ ಕೊಹ್ಲಿ ಔಟ್? ಎಂಬ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಶ್ರೇಯಾಂಕಾ ಪಾಟೀಲ್ ಅವರು ಆರ್ಸಿಬಿ, ಪುರುಷರ ತಂಡಕ್ಕೆ ಬಂದು ಸೇರುತ್ತಾರೆ, ಆ ಮೂಲಕ ಕಪ್ ಗೆಲ್ಲಿಸುತ್ತಾರೆ ಅಂತಿದ್ದಾರೆ ಇವರು!
ಆನ್ಲೈನ್ ನಲ್ಲಿ ಹೆಚ್ಚು ಇರುವುದು ಹುಡುಗರಲ್ಲ, ಹುಡುಗಿಯರು! – ಸಂಶೋಧನೆ!
ಅಭಿಮಾನಿಗಳು, ಶ್ರೇಯಾಂಕಾ ಪಾಟೀಲ್ ಅವರನ್ನು ಲೇಡಿ ಕೊಹ್ಲಿ ಅಂತಾನೆ ಕರೆಯುತ್ತಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ಗೆ ಬಂದಾಗ ಹೇಗೆ ಆಂಗ್ರಿ ಯಂಗ್ ಮ್ಯಾನ್ ಆಗಿದ್ರೋ ಅದೇ ರೀತಿ ಶ್ರೇಯಾಂಕಾ ಪಾಟೀಲ್ ಕೂಡ ಮಿಂಚುತ್ತಿದ್ದಾರೆ. ಮೈದಾನದ ಅಖಾಡದಲ್ಲಿ ಕ್ರಿಕೆಟ್ ಜೊತೆ ಎದುರಾಳಿಗಳ ಮೈಂಡ್ ಗೇಮ್ ಎದುರಿಸುವಲ್ಲೂ, ಶ್ರೇಯಾಂಕಾ ಪಾಟೀಲ್ ಎಕ್ಸ್ಪರ್ಟ್ ಆಗುತ್ತಿದ್ದಾರೆ. ಹೀಗೆ ಚಿಕ್ಕ ಹುಡುಗಿ ಮಾಡುತ್ತಿರುವ ದೊಡ್ಡ ಸಾಧನೆ ಗಮನ ಸೆಳೆಯುತ್ತಿದೆ.
ಮತ್ತೊಂದು ಕಡೆ, ಶ್ರೇಯಾಂಕಾ ಪಾಟೀಲ್ ಭವಿಷ್ಯದ ಭಾರತೀಯ ಕ್ರಿಕೆಟ್ನ ಸ್ಟಾರ್ ಆಟಗಾರ್ತಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಿದ್ದಾರೆ ಅಭಿಮಾನಿಗಳು! ಇದರಿಂದ ಆರ್ಸಿಬಿ ಅಭಿಮಾನಿಗಳು ಕೂಡ ಚರ್ಚೆ ಆರಂಭಿಸಿದ್ದು ಕೊಹ್ಲಿ ಅವರ ಮೇಲೆ ಒತ್ತಡವನ್ನ ಹಾಕಬೇಡಿ. ಅವರನ್ನ ಬೇಕಾದರೆ ಆರ್ಸಿಬಿಯಿಂದ ಹೊರಗಿಡಿ. ಹಾಗೇ ಶ್ರೇಯಾಂಕಾ ಪಾಟೀಲ್ ಅವರ ಸ್ಪಿನ್ ಬೌಲಿಂಗ್ ಉತ್ತಮವಾಗಿದೆ. ಅವರಿಗೆ ಆರ್ಸಿಬಿ ಹುಡುಗರ ತಂಡದಲ್ಲಿ ಅವಕಾಶವನ್ನು ನೀಡಿ ಎನ್ನುತ್ತಿದ್ದಾರೆ ಆರ್ಸಿಬಿ ಫ್ಯಾನ್ಸ್. ಯಾಕಂದ್ರೆ ಪ್ರತಿ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅವರು 2024ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಆಟ ಆಡುತ್ತಿದ್ದಾರೆ. ಆದರೂ ಮಿಕ್ಕವರು ಔಟ್ ಆಗಿ ಗೂಡು ಸೇರುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಆಕ್ರೋಶವು ಮೊಳಗಿದೆ.