ಯಶ್ ನಟನೆಯ ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡ ಶ್ರೀನಿಧಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ತಮ್ಮ ಹೊಸ ಹೊಸ ಫೋಟೋಗಳನ್ನು ಅಪ್ ಲೋಡ್ ಮಾಡುವ ನಟಿ ಇದೀಗ ಮೂಗುತಿ ಧರಿಸಿ, ಹಸಿರು ಸೀರೆಯುಟ್ಟು ಮತ್ತಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಕೆಜಿಎಫ್ ಚಿತ್ರದ ಸಕ್ಸಸ್ ನಂತರ ಶ್ರೀನಿಧಿ ಶೆಟ್ಟಿಗೆ ಹೇಳಿಕೊಳ್ಳುವ ಅವಕಾಶಗಳು ಸಿಗುತ್ತಿಲ್ಲ. ನಟಿ ಒಂದೊಳ್ಳೆ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ. ಇತ್ತೀಚೆಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಸ್ಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಶ್ರೀನಿಧಿ ಶೆಟ್ಟಿ ತಮ್ಮಇನ್ಸ್ಟಾಗ್ರಾಂ ಖಾತೆಯಲ್ಲಿ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಂದ ಹಾಗೆ ಸಾಕಷ್ಟು ಭಾರಿ ಶ್ರೀನಿಧಿ ಸೀರೆಯುಟ್ಟು ಫೋಟೋಗೆ ಫೋನ್ ನೀಡಿದ್ದಾರೆ. ಆದರೆ ಈ ಭಾರಿ ಅವರು ಧರಿಸಿದ ಮೂಗುತಿ ಸಖತ್ ಹೈಲೈಟ್ ಆಗಿದೆ.
ಕೆಜಿಎಫ್ ಸುಂದರಿಯ ಶ್ರೀನಿಧಿ ಶೆಟ್ಟಿಯ ಈ ಫೋಟೋಗಳಿಗೆ ಫ್ಯಾನ್ಸ್ ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ. ಮೂಗುತಿ ಸುಂದ್ರಿ, ಬ್ಯೂಟಿಫುಲ್, ಗಾರ್ಜಿಯಸ್, ಇದು ನಮ್ಮ ಸಂಸ್ಕೃತಿ ಎಂದೆಲ್ಲಾ ಹೊಗಳಿ ಕಮೆಂಟ್ ಮಾಡಿದ್ದಾರೆ.
ಶ್ರೀನಿಧಿ ಶೆಟ್ಟಿ ಅಕ್ಟೋಬರ್ 21, 1992ರಂದು ಕರ್ನಾಟಕದ ಮಂಗಳೂರಿನ ಕಿನ್ನಿಗೋಳಿಯಲ್ಲಿ ಹುಟ್ಟಿದರು. ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು 2015ರಲ್ಲಿ ‘ಮಿಸ್ ಕರ್ನಾಟಕ’ ಕಿರೀಟವನ್ನು ಮುಡಿಗೇರಿಸಿಕೊಂಡರು.
ಇನ್ನು ಶ್ರೀನಿಧಿ ‘ಮಿಸ್ ದಿವಾ’ 2016ರಲ್ಲಿ ಸೂಪರ್ ನ್ಯಾಷನಲ್ ಆಗಿ ಹೊರಹೊಮ್ಮಿದರು. ಜೊತೆಗೆ ‘ಮಣಪ್ಪುರಂ ಮಿಸ್ ಕ್ವೀನ್ ಇಂಡಿಯಾ’ ಕಿರೀಟವನ್ನು ಗೆದ್ದರು. ಇನ್ನು ಶ್ರೀನಿಧಿ ಅನೇಕ ಉತ್ಪನ್ನಗಳಿಗೆ ಮಾಡೆಲ್ ಆಗಿಯೂ ಸಹ ಕೆಲಸ ಮಾಡಿದ್ದಾರೆ.
ಕೆಜಿಎಫ್ 2 ಮಾಡುವಾಗಲೇ ಶ್ರೀನಿಧಿ ಶೆಟ್ಟಿ ಕಾಲಿವುಡ್ನ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಚಿಯಾನ್ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಮೂಲಕ ಕೆಜಿಎಫ್ ಸುಂದರಿ ಗಮನ ಸೆಳೆದಿದ್ದರು. ಆದರೆ, ಈ ಚಿತ್ರ ಬಾಕ್ಸಾಫೀಸ್ನಲ್ಲಿ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ.