ಬೆಳ್ಳುಳ್ಳಿಯ ವಾಸನೆಯು ನಿಮಗೆ ಉತ್ತಮ ನಿದ್ರೆಯನ್ನು ತಂದುಕೊಡಬಲ್ಲದು ಎಂದರೆ ನೀವು ನಂಬುತ್ತೀರಾ..? ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಸುಖ ನಿದ್ರೆ ಜಾರಬಹುದು..!
ಲೋಕಸಭಾ ಚುನಾವಣೆಗೆ ರಣತಂತ್ರ: ಚಿತ್ರದುರ್ಗದಲ್ಲಿ ಜರುಗಿದ ಬಿಜೆಪಿ ಸಾರ್ವಜನಿಕ ಸಭೆ!
ಬೆಳ್ಳುಳ್ಳಿಯಲ್ಲಿರುವ ವಿಟಮಿನ್ ಬಿ 1 ಅಂಶವು ನಿದ್ರೆಯ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ತಿಳಿದು ಬಂದಿದೆ. ಇದು ಮಾತ್ರವಲ್ಲ..! ಬೆಳ್ಳುಳ್ಳಿ ಹೊರ ಸೂಸುವ ಘಾಟು ವಾಸನೆಯು ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಮೂಲಕ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ನಾವು ಬೆಳ್ಳುಳ್ಳಿಯನ್ನು ಕತ್ತರಿಸಿದಾಗ ಅದು ಹೊರ ಸೂಸುವ ವಾಸನೆಯು ಬೆಳ್ಳುಳ್ಳಿ ಗಿಡದ ರಕ್ಷಣಾ ಕಾರ್ಯ ವಿಧಾನವಾಗಿದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ರಾಸಾಯನಿಕವು ಗಾಳಿಯೊಂದಿಗೆ ಸೇರಿ ಈ ವಾಸನೆಯನ್ನು ಹೊರ ಹಾಕುತ್ತದೆ. ಈ ವಾಸನೆಯು ಸೋಂಕಿಗೆ ಕಾರಣವಾಗಬಲ್ಲ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ನೀವು ಮಲಗುವ ಹಾಸಿಗೆಯು ಜೇಡ, ನೊಣ, ಸೊಳ್ಳೆ ಸೇರಿದಂತೆ ಇತರೆ ಕೀಟಗಳಿಗೂ ವಾಸಸ್ಥಾನವಾಗಿರಬಾರದು. ಹೀಗಾಗಿ ಇವುಗಳಿಂದ ಪಾರಾಗಬೇಕು ಎಂದುಕೊಂಡಿದ್ದರೆ ಖಂಡಿತವಾಗಿ ನಿಮಗೆ ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಿಂದ ಹೊರ ಬರುವ ವಾಸನೆಯು ಕರೆಯದೇ ಬರುವ ಈ ಅತಿಥಿಗಳನ್ನು ಹೊಡೆದು ಓಡಿಸುವ ಸಾಮರ್ಥ್ಯ ಹೊಂದಿದೆ. ಯಾವುದೇ ಕೀಟಗಳಿಗೆ ಬೆಳ್ಳುಳ್ಳಿಯ ಘಮವನ್ನು ತಡೆದುಕೊಳ್ಳುವಂಥ ಶಕ್ತಿ ಇರುವುದಿಲ್ಲ. ಈ ವಾಸನೆಯು ಕೀಟಗಳಿಗೆ ವಿಷಕಾರಿಯಾಗಿದೆ. ಹೀಗಾಗಿ ಮಲಗುವಾಗ ಬೆಳ್ಳುಳ್ಳಿ ನಿಮ್ಮ ಹತ್ತಿರಕ್ಕೆ ಇಟ್ಟುಕೊಳ್ಳುವುದು ಒಳ್ಳೆಯದು..!
ಆದರೆ ನೀವು ಗಮನಿಸಬೇಕಾದ ಇನ್ನೊಂದು ವಿಚಾರ ಏನೆಂದರೆ ಕೇವಲ ಕೀಟಗಳಿಗೆ ಮಾತ್ರವಲ್ಲ ನೀವು ಪ್ರೀತಿಯಿಂದ ಸಾಕಿರುವ ಪ್ರಾಣಿಗಳಿಗೂ ಬೆಳ್ಳುಳ್ಳಿ ವಾಸನೆ ಒಳ್ಳೆಯದಲ್ಲ. ನೀವು ಮಲಗುವ ಕೋಣೆಯಲ್ಲಿ ನಿಮ್ಮ ನಾಯಿ ಹಾಗೂ ಬೆಕ್ಕು ಕೂಡ ಇರುತ್ತದೆ ಎಂದರೆ ಬೆಳ್ಳುಳ್ಳಿ ಬಳಕೆ ಬೇಡ. ಸಾಕು ಪ್ರಾಣಿಗಳು ಇವುಗಳನ್ನು ತಿನ್ನುವುದರಿಂದಲೂ ಸಮಸ್ಯೆಗಳು ಎದುರಾಗುತ್ತದೆ.
ಕೆಲವೊಂದು ಸೀಸನ್ಗಳಲ್ಲಿ ಸೊಳ್ಳೆ ಕಾಟ ಹೆಚ್ಚಾಗಿರುತ್ತದೆ. ಹೀಗಾಗಿ ಸಂಜೆ ವೇಳೆಗೆ ನೀವು ಬೆಳ್ಳುಳ್ಳಿ ಜಜ್ಜಿ ರಸ ತೆಗೆದು ಇದನ್ನು ನಿಮ್ಮ ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಸೊಳ್ಳೆಗಳ ಕಾಟದಿಂದ ಸುಲಭವಾಗಿ ಬಚಾವಾಗಬಹುದಾಗಿದೆ.
ಕೆಲವೊಮ್ಮೆ ಚಿಕ್ಕದಾದ ಚೂಪಾದ ವಸ್ತು ಚರ್ಮದ ಒಳಗೆ ಸೇರಿ ಬಿಡುತ್ತದೆ. ಇದು ತೆಗೆದು ಹಾಕುವುದು ಸಹ ಕಷ್ಟದ ಕೆಲಸ. ಆದರೆ ಬೆಳ್ಳುಳ್ಳಿಯ ಸಹಾಯದಿಂದ ನೀವು ನಿಮ್ಮ ಚರ್ಮಕ್ಕೆ ಚುಚ್ಚಿಕೊಂಡಿರುವ ಚಿಕ್ಕದಾದ ಚೂಪಾದ ವಸ್ತುಗಳನ್ನು ತೆಗೆದು ಹಾಕಬಹುದಾಗಿದೆ. ಒಂದು ಬೆಳ್ಳುಳ್ಳಿಯನ್ನು ಕತ್ತರಿಸಿಕೊಳ್ಳಿ. ನಿಮ್ಮ ಚರ್ಮಕ್ಕೆ ಚೂಪಾದ ವಸ್ತು ಚುಚ್ಚಿಕೊಂಡ ಜಾಗಕ್ಕೆ ಲೇಪಿಸಿ. ಬಳಿಕ ಬ್ಯಾಂಡೇಜ್ ಸುತ್ತಿಕೊಳ್ಳಿ.
ಆದರೆ ಕೆಲವು ಸಮಯದ ಬಳಿಕ ಇದು ಚೂಪಾದ ವಸ್ತುವನ್ನು ಚರ್ಮದಿಂದ ಹೊರಬರುವಂತೆ ಮಾಡಿರುತ್ತದೆ. ಇದರಿಂದ ನೀವು ಸುಲಭವಾಗಿ ಅದನ್ನು ತೆಗೆದು ಹಾಕಲು ಸಾಧ್ಯವಿದೆ
ಕೂದಲಿನ ಆರೈಕೆಯ ವಿಚಾರದಲ್ಲಿಯೂ ಬೆಳ್ಳುಳ್ಳಿ ಉತ್ತಮ ಆಯ್ಕೆಯಾಗಿದೆ. ನಿಮಗೆ ಅತಿಯಾಗಿ ಕೂದಲು ಉದುರುತ್ತಿದ್ದರೆ ನೀವು ಬೆಳ್ಳುಳ್ಳಿ ಬಳಕೆ ಮಾಡಬಹುದು. ದಿನಕ್ಕೆ ನೂರು ಕೂದಲು ಉದುರುವುದು ಸಾಮನ್ಯ ಪ್ರಕ್ರಿಯೆಯಾಗಿದೆ. ಆದರೆ ಇದಕ್ಕಿಂತ ಜಾಸ್ತಿ ಕೂದಲು ಉದುರುವುದು ಒಳ್ಳೆಯದಲ್ಲ. ನೀವು ಸಾಮಾನ್ಯಕ್ಕಿಂತ ಜಾಸ್ತಿ ಕೂದಲನ್ನು ಕಳೆದುಕೊಳ್ಳುತ್ತಿದ್ದೀರಾ ಎಂಬು ಪರೀಕ್ಷಿಸಲು ನೀವು ಈ ರೀತಿ ಮಾಡಬೇಕು.
ಈ ಪ್ರಕ್ರಿಯೆ ಆರಂಭಿಸುವ ಮುನ್ನ ನಿಮ್ಮ ಕೂದಲು ಶುದ್ಧವಾಗಿರಬೇಕು. ಒಣಗಿರಬಾರದು ಹಾಗೂ ಯಾವುದೇ ರೀತಿಯಲ್ಲಿ ಸಿಕ್ಕು ಸಿಕ್ಕಾಗಿರಬಾರದು. ನಿಮ್ಮ ಕೂದಲಿನ ನಡುವೆ ಬೆರಳುಗಳನ್ನು ಹಾಕಿ ನೋಡಿ. ಈಗ ಎಷ್ಟು ಕೂದಲು ಉದುರಿತು ಎಂಬುದನ್ನು ನೋಡಿ. ಪ್ರತಿ ಬಾರಿ ನೀವು ಕೂದಲುಗಳ ನಡುವೆ ಬೆರಳುಗಳನ್ನು ಹಾಕಿ ಹೊರ ತೆಗೆದಾಗ ಮೂರಕ್ಕಿಂತ ಹೆಚ್ಚು ಕೂದಲು ನಿಮ್ಮ ಕೈಗೆ ಬರುತ್ತಿದ್ದರೆ ನೀವು ಬೆಳ್ಳುಳ್ಳಿ ಸಹಾಯವನ್ನು ಪಡೆಯುವ ಸಮಯ ಬಂದಿದೆ ಎಂದೇ ಅರ್ಥ. ಬೆಳ್ಳುಳ್ಳಿಯು ನಿಮ್ಮ ಕೂದಲಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಯಲ್ಲಿ ಹೆಚ್ಚೆಚ್ಚು ಕೂದಲು ಬೆಳೆಯಲು ಸಹಕಾರಿಯಾಗಿದೆ
ಬೆಳ್ಳುಳ್ಳಿಯಲ್ಲಿರುವ ಕಾಲಜನ್ ಎಂಬ ಪ್ರೊಟೀನ್ ಅಂಶವು ನಿಮ್ಮ ಕೂದಲುಗಳನ್ನು ಬಲಪಡಿಸುತ್ತದೆ. ಹೆಚ್ವೆಚ್ಚು ಕಾಲಜನ್ಗಳ ಉತ್ಪಾದನೆಯು ಕೂದಲಿನ ಬೆಳವಣಿಗೆಯನ್ನು ಇನ್ನಷ್ಟು ಉತ್ತೇಜಿಸುತ್ತದೆ. ಅಲ್ಲದೇ ಕೂದಲು ಬಿಳಿಯಾಗುವುದನ್ನು ತಡೆಯುವ ಸಾಮರ್ಥ್ಯ ಕೂಡಾ ಬೆಳ್ಳುಳ್ಳಿಗೆ ಇದೆ.