ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ರಶ್ಮಿಕಾ ಪರ ಅನೇಕರು ಮಾತನಾಡಿದ್ದರು. ದುರುಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು, ಡೀಪ್ ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿತ್ತು. ಆದರೂ, ಡೀಪ್ ಫೇಕ್ ಕಾಟ ಮುಂದುವರೆದಿದೆ. ಬಾಲಿವುಡ್ (Bollywood) ನಟಿ ಕತ್ರಿನಾ ಕೈಫ್ (Katrina Kaif) ಫೋಟೋ ಕೂಡ ಡೀಪ್ ಫೇಕ್ ಮಾಡಲಾಗಿದೆ.
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಡೀಪ್ನೆಕ್ ಬ್ಲಾಕ್ ಡ್ರೆಸ್ನಲ್ಲಿದ್ದ ಯುವತಿಯೊಬ್ಬರ ವಿಡಿಯೋವನ್ನು ಥೇಟ್ ರಶ್ಮಿಕಾ ಮಂದಣ್ಣ ಅವರಂತೆ ಮಾರ್ಫ್ ವಿಡಿಯೋ ಸೃಷ್ಟಿಸಿದ್ದರು. ವಿಡಿಯೋದಲ್ಲಿರುವುದು ರಶ್ಮಿಕಾ ಅಲ್ಲ, ಜರಾ ಪಟೇಲ್ ಎನ್ನುವುದು ಗೊತ್ತಾಗಿತ್ತು. ಡೀಪ್ಫೇಕ್ ತಂತ್ರಜ್ಞಾನ (Deepfake Technology) ಬಳಸಿ ರಶ್ಮಿಕಾ ಹೆಸರಿಗೆ ಮಸಿ ಬಳಿಯಲು ಕಿಡಿಗೇಡಿಗಳು ಯತ್ನಿಸಿದ್ದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು
ಸೂಪರ್ ಸ್ಟಾರ್, ನಟ ಅಮಿತಾಬ್ ಕೂಡ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ಕೃತ್ಯ. ಇಂತಹ ಮಾರ್ಫಿಂಗ್ ವಿಡಿಯೋಗಳ ನಿಯಂತ್ರಣ ಸಾಮಾಜಿಕ ಜಾಲತಾಣಗಳ (Social Media) ಹೊಣೆ. ಅಪ್ಲೋಡ್ ಆದ 36 ಗಂಟೆಗಳಲ್ಲಿ ಇವುಗಳನ್ನು ತೊಲಗಿಸದಿದ್ದರೆ ಅಂತಹ ಸಾಮಾಜಿಕ ಜಾಲತಾಣವನ್ನು ಕೋರ್ಟ್ಗೆ ಎಳೆಯಬಹುದು ಎಂದು ಸ್ಪಷ್ಟಪಡಿಸಿದೆ.