ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಈ ವಾರ ಮಹಾಯುದ್ಧವೇ ನಡೆದಿದೆ. ವಿನಯ್ (Vinay Gowda) ಮತ್ತು ಕಾರ್ತಿಕ್ (Karthik Mahesh) ಜಗಳ ಮೀತಿ ಮೀರಿದೆ. ಇದೀಗ ಕಾರ್ತಿಕ್ ತನಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ನಾನು ಈ ಮನೆಯಲ್ಲಿ ಇರಬೇಕಾ? ಎಂದು ವಿನಯ್ ಗುಡುಗಿದ್ದಾರೆ. ಕಾರ್ತಿಕ್ ಯಾವ ತಪ್ಪು ಮಾಡಿಲ್ಲ, ಚಪ್ಪಲಿ ಏಟು ಬಿದ್ದಿಲ್ಲ ಎಂದು ಮೈಕಲ್ ಎದುರಾಳಿ ಪರ ವಹಿಸಿದ್ದಾರೆ. ಮೈಕಲ್ ನಡೆ ಇದೀಗ ವಿನಯ್ ಕೆಂಗಣ್ಣಿಗೆ ಗುರಿಯಾಗಿದೆ.
ಈ ವಾರ ಬಿಗ್ ಬಾಸ್ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ತಂಡಗಳಾಗಿ ಮಾಡಿದ್ದು, ಕಾರ್ತಿಕ್ ಮತ್ತು ವಿನಯ್ ಬೇರೆ ಬೇರೆ ತಂಡದಲ್ಲಿ ಇದ್ದರು. ರಾಕ್ಷಸ ತಂಡದ ವಿನಯ್, ಗಂಧರ್ವ ತಂಡದ ಕಾರ್ತಿಕ್ಗೆ ಟಾಸ್ಕ್ ಕೊಡುವಾಗ ಜಟಾಪಟಿ ಶುರುವಾಗಿದೆ. ವಿನಯ್ & ಟೀಮ್ ಈ ಟಾಸ್ಕ್ನ ಪರ್ಸನಲ್ ದ್ವೇಷಕ್ಕೆ ಬಳಸಿಕೊಂಡು ಕಾರ್ತಿಕ್ಗೆ ಟಾರ್ಗೆಟ್ ಮಾಡಿದ್ದಾರೆ. ಮುಖಕ್ಕೆ ನೊರೆ ಹಾಕಿದ್ದು, ಚಪಾತಿ ಹಿಟ್ಟಿನಲ್ಲಿ ಮುಖಕ್ಕೆ ಹೊಡೆದಿರೋದು ಹೀಗೆ ನಾನಾ ರೀತಿಯಲ್ಲಿ ಕಾರ್ತಿಕ್ಗೆ ಟಾರ್ಚರ್ ಕೊಟ್ಟಿದ್ದಾರೆ ವಿನಯ್.
ಸಂಗೀತಾ- ಕಾರ್ತಿಕ್ ಟೀಮ್ ಕೂಡ ಸ್ಮಾರ್ಟ್ ಆಗಿ ಆಟ ಆಡಿಸಿ, ಎದುರಾಳಿ ತಂಡಕ್ಕೆ ಹತಾಶರಾಗುವಂತೆ ಮಾಡಿದ್ದಾರೆ. ಹೀಗೆ ಟಾಸ್ಕ್ ಕೊಡುವಾಗ ‘ಹೇ ಬಾರೋ ಲೋ ಗುಲಾಮ’ ಎಂದು ಕಾರ್ತಿಕ್ಗೆ ಕಿರಿಕಿರಿ ಮಾಡಿದ್ದಾರೆ ವಿನಯ್. ಚಪಾತಿ ಹಿಟ್ಟಿನಲ್ಲಿ ಕಾರ್ತಿಕ್ ಮುಖಕ್ಕೆ ಹೊಡೆದು ಇನ್ಸಲ್ಟ್ ಮಾಡಿದ ಮೇಲೆ ಇಬ್ಬರ ನಡುವೆಯೂ ವಾಕ್ಸಮರ ನಡೆದಿದೆ.
ಆಗ ಕಾರ್ತಿಕ್ ಕೋಪಕ್ಕೆ ಚಪ್ಪಲಿ ತೆಗೆದು ನೆಲಕ್ಕೆ ಹೊಡೆದಿದ್ದಾರೆ. ಅದು ಬೌನ್ಸ್ ಆಗಿ ವಿನಯ್ಗೆ ತಾಗಿದೆ. ನನಗೆ ಚಪ್ಪಲಿಯಲ್ಲಿ ಕಾರ್ತಿಕ್ ಹೊಡೆದ ಅಂತ ವಿನಯ್ ರಂಪಾಟ ಮಾಡಿದ್ದಾರೆ. ಆಗ ಮೈಕಲ್, ಕಾರ್ತಿಕ್ ಚಪ್ಪಲಿಯನ್ನ ನೆಲಕ್ಕೆ ಹೊಡೆದಿದ್ದಾರೆ. ಅದು ಬೌನ್ಸ್ ಆಗಿ ನಿಮಗೆ ಬಿದ್ದಿದೆ ಅಷ್ಟೇ. ಇದರಲ್ಲಿ ಕಾರ್ತಿಕ್ ಏನೂ ತಪ್ಪು ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದರು. ಮೈಕಲ್ ಈ ಮಾತು ವಿನಯ್ಗೆ ಮತ್ತಷ್ಟು ಸಿಟ್ಟು ತರಿಸಿದೆ.