ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಆಗಾಗ ಸುದ್ದಿಯಲ್ಲಿರುತ್ತಾರೆ. ಗೆಳೆಯ ಸುಕೇಶ್ ಚಂದ್ರಶೇಖರ್ ಜೊತೆಗಿನ ಸ್ನೇಹದಿಂದ ಸಾಕಷ್ಟು ನೋವು ಅನುಭವಿಸಿದ ನಟಿ ಇದೀಗ ಸಾಮಾಜಿಕ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ.
ಜೂನ್ 5 ವಿಶ್ವ ಪರಿಸರ ದಿನಾಚರಣೆ. ಈ ಸಂದರ್ಭದಲ್ಲಿ ಅನೇಕರು ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನೂ ಕೆಲವರು ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ. ಜಾಕ್ವೆಲಿನ್ ಕೂಡ ಇದೇ ರೀತಿಯ ಕೆಲಸ ಮಾಡಿದ್ದಾರೆ. ನಟಿ ಮುಂಬೈನಲ್ಲಿ ಸಮುದ್ರ ತೀರವನ್ನು ಸ್ವಚ್ಛ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
‘ಬೀಚ್ ಪ್ಲೀಸ್ ಇಂಡಿಯಾ’ ಕಮ್ಯೂನಿಟಿಯ ಜೊತೆ ಸೇರಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದಾರೆ. ಈ ಫೋಟೋ ತೆಗೆದ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜ್ಯವಾಗಿ ಸೆಲೆಬ್ರಿಟಿಗಳು ಏನೇ ಮಾಡಿದರು ಅದನ್ನು ಅಭಿಮಾನಿಗಳು ಫಾಲೋ ಮಾಡುತ್ತಾರೆ. ಅಲ್ಲದೆ ಈ ರೀತಿ ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಂಡರೆ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗುತ್ತದೆ.
ಜಾಕ್ವೆಲಿನ್ ಫರ್ನಾಂಡಿಸ್ಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ. ಸ್ವಚ್ಛತೆ ವೇಳೆ ಸಿಕ್ಕ ಶ್ವಾನವನ್ನು ಅವರು ಪ್ರೀತಿಯಿಂದ ಮುದ್ದು ಮಾಡಿದ್ದಾರೆ.
ಜಾಕ್ವೆಲಿನ್ ಅವರು ಶ್ರೀಲಂಕಾದವರು. ಅವರು ಭಾರತಕ್ಕೆ ಬಂದು ಬಾಲಿವುಡ್ನಲ್ಲಿ ನೆಲೆಕಂಡುಕೊಂಡಿದ್ದಾರೆ. ವಿವಾದಗಳ ಮೂಲಕವೂ ಸಾಕಷ್ಟು ಸುದ್ದಿ ಆಗಿದ್ದಾರೆ. ಇದೀಗ ಸಾಮಾಜಿಕ ಕೆಲಸದ ಮೂಲಕ ಮಾದರಿಯಾಗಿದ್ದಾರೆ.