ಗಾಝಾ: ಇಸ್ರೇಲ್ ನ ಜೈಲಿನಲ್ಲಿ ಬಂಧನದಲ್ಲಿರುವ ಫೆಲೆಸ್ತೀನ್ ಕೈದಿಗಳನ್ನು `ನಿಧಾನವಾಗಿ ಹತ್ಯೆ’ಗೈಯುವ ನೀತಿಯನ್ನು ಇಸ್ರೇಲ್ ಅಳವಡಿಸಿಕೊಂಡಿದೆ ಎಂದು ಹಮಾಸ್ ಆರೋಪ ಮಾಡಿದೆ.
ಕದನ ವಿರಾಮ ಒಪ್ಪಂದದ ಅನ್ವಯ ಶನಿವಾರ ಇಸ್ರೇಲ್ ಬಿಡುಗಡೆಗೊಳಿಸಿದ ಕೈದಿಗಳಲ್ಲಿ 7 ಜನರು ತೀರಾ ಅಸ್ವಸ್ಥರಾಗಿದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಸ್ರೇಲ್ ನ ಜೈಲು ಅಧಿಕಾರಿಗಳು ನಮ್ಮ ಕೈದಿಗಳ ಮೇಲೆ ವ್ಯವಸ್ಥಿತ ಹಲ್ಲೆ ಮತ್ತು ದೌರ್ಜನ್ಯ ನಡೆಸಿರುವುದನ್ನು ಇದು ಪ್ರತಿಬಿಂಬಿಸಿದೆ ಎಂದು ಹಮಾಸ್ ಆರೋಪಿಸಿದೆ.
“ಕಳೆದ ತಿಂಗಳುಗಳಲ್ಲಿ ಅವರು ಅನುಭವಿಸಿದ ಕ್ರೂರತೆಯ ಪರಿಣಾಮವಾಗಿ ಇಂದು ಬಿಡುಗಡೆಯಾದ ಎಲ್ಲಾ ಕೈದಿಗಳಿಗೆ ವೈದ್ಯಕೀಯ ಆರೈಕೆ, ಚಿಕಿತ್ಸೆ ಮತ್ತು ಪರೀಕ್ಷೆಗಳ ಅಗತ್ಯವಿದೆ. ಏಳು ಮಂದಿಯನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಪ್ಯಾಲೇಸ್ಟಿನಿಯನ್ ಪ್ರಿಸನರ್ಸ್ ಕ್ಲಬ್ನ ಮುಖ್ಯಸ್ಥ ಅಬ್ದುಲ್ಲಾ ಅಲ್-ಜಗಾರಿ ಹೇಳಿದ್ದಾರೆ.
ಏಳು ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್ ದೃಢಪಡಿಸಿದೆ.