ಕಡಿಮೆ ವೆಚ್ಚದಲ್ಲಿ ಹೆಚ್ಚು ಪೋಷಕಾಂಶಗಳನ್ನು ಒದಗಿಸುವ ಆಹಾರವೊಂದಿದ್ದರೆ ಅದು ಮೊಟ್ಟೆ. ವೆಜಟೇರಿಯನ್, ನಾನ್ ವೆಜಟೇರಿಯನ್, ಈಗ ಎಗ್ಟೇರಿಯನ್ ಪದ ಬಳಕೆಗೆ ಬಂದಿದೆ. ಪ್ರತಿದಿನ ಒಂದೊಂದು ಎಗ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞ ವೈದ್ಯರು ಹೇಳುತ್ತಾರೆ.
ಟ್ಯೂಷನ್ ಮುಗಿಸಿ ಮನೆಗೆ ವಾಪಸ್ ಬರುತ್ತಿರುವ ವೇಳೆ PU ವಿದ್ಯಾರ್ಥಿ ಮೇಲೆ ಡೆಡ್ಲಿ ಅಟ್ಯಾಕ್!
ಪ್ರತಿಯೊಬ್ಬರೂ ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಮೊಟ್ಟೆಗಳಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ವಿಶೇಷವಾಗಿ, ಇದು ಪ್ರೋಟೀನ್ನಿಂದ ಸಮೃದ್ಧವಾಗಿದೆ, ಇದು ಸ್ನಾಯುಗಳನ್ನು ಬಲಪಡಿಸಲು ಮತ್ತು ಸರಿಪಡಿಸಲು ಅವಶ್ಯಕವಾಗಿದೆ. ವೃದ್ಧಾಪ್ಯದಲ್ಲಿಯೂ ನಿಮ್ಮ ಜ್ಞಾಪಕ ಶಕ್ತಿಯನ್ನು ಬಲವಾಗಿಡಲು ನೀವು ಬಯಸಿದರೆ, ನೀವು ಮೊಟ್ಟೆಗಳನ್ನು ಸೇವಿಸಬೇಕು ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಮೊಟ್ಟೆಗಳು ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದ್ದು, ನಿಮ್ಮ ಡಯಟ್ಗೆ ಇದು ಆರೋಗ್ಯಕರವಾದ ಸೇರ್ಪಡೆಯಾಗಿದೆ ಅಂತ ಹೇಳಲಾಗುತ್ತದೆ. ನೀವು ಈ ಮೊಟ್ಟೆಗಳನ್ನು ಕುದಿಸಿಕೊಂಡು ಅಥವಾ ಆಮ್ಲೆಟ್ ಮಾಡಿಕೊಂಡು ಸಹ ಸೇವಿಸಬಹುದು. ಇದನ್ನು ಹೇಗೆ ಸೇವಿಸಿದರೂ ಸಹ ಇದರೊಳಗಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಸಿಕ್ಕೆ ಸಿಗುತ್ತವೆ. ಆದ್ದರಿಂದಲೇ ಇದನ್ನು ವಿಶ್ವದ ಪೌಷ್ಟಿಕಾಂಶದ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಒಂದು ಮೊಟ್ಟೆ ಸುಮಾರು 77 ಕ್ಯಾಲೋರಿಗಳನ್ನು ಹೊಂದಿದ್ದು, ಅದರಲ್ಲಿ 6 ಗ್ರಾಂ ಪ್ರೊಟೀನ್, 5 ಗ್ರಾಂ ಆರೋಗ್ಯಕರ ಕೊಬ್ಬು, ವಿಟಮಿನ್ ಎ, ಡಿ, ಇ ಮತ್ತು ಬಿ12 ಅನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಮೊಟ್ಟೆ ಒಳಗಿರುವ ಹಳದಿ ಬಣ್ಣದ ಪದಾರ್ಥವು ಚೋಲೈನ್ ಅನ್ನು ಹೊಂದಿರುತ್ತದೆ. ಈ ಅಂಶವು ಮಿದುಳಿನ ಮತ್ತು ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಮುಖ್ಯವಾಗಿರುತ್ತದೆ. ಅನೇಕರಿಗೆ ಇಂತಹ ಪೌಷ್ಟಿಕಭರಿತ ಆಹಾರ ಪದಾರ್ಥವನ್ನು ಪ್ರತಿ ದಿನ ತಿನ್ನವುದರಿಂದ ಏನೆಲ್ಲಾ ಪ್ರಯೋಜನಗಳಿರುತ್ತವೆ ಅನ್ನೋದು ಅಷ್ಟಾಗಿ ತಿಳಿದಿರುವುದಿಲ್ಲ.
ಸ್ನಾಯುಗಳ ಆರೋಗ್ಯ: ಮೊಟ್ಟೆಯನ್ನು ಪ್ರತಿ ದಿನ ತಿನ್ನುವುದರಿಂದ ತುಂಬಾನೇ ಮುಖ್ಯವಾದ ಪ್ರಯೋಜನ ಎಂದರೆ ಇದರಲ್ಲಿರುವ ಪ್ರೋಟೀನ್ ಅಂಶ ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ ಅಂತ. ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶವು ಎಲ್ಲಾ 9 ಅಮೈನೋ ಆಸಿಡ್ಗಳನ್ನು ಹೊಂದಿದೆ, ಇದು ಜಿಮ್ಗೆ ಹೋಗಿ ತಾಲೀಮು ಮಾಡುವವರಿಗೆ ಸ್ನಾಯುಗಳನ್ನು ಬಲಗೊಳಿಸಲು ಮತ್ತು ಅದರ ಆರೋಗ್ಯವನ್ನು ವೃದ್ಧಿಸಲು ತುಂಬಾನೇ ಸಹಾಯ ಮಾಡುತ್ತದೆ. ಎಲ್ಲಾ ವಯೋಮಾನದವರೂ ಸಹ ಮೊಟ್ಟೆ ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಮೂಳೆಗಳ ಆರೋಗ್ಯ: ಮೊಟ್ಟೆಗಳು ವಿಟಮಿನ್ ಡಿ ಅನ್ನು ಹೊಂದಿರುತ್ತದೆ, ಇದು ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಡಿ ಅಂಶವು ಕ್ಯಾಲ್ಸಿಯಮ್ ಅಂಶವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಬಹುದು. ಇದು ಆಸ್ಟಿಯೋಪೊರೋಸಿಸ್ ಮತ್ತು ಮೂಳೆ ಮುರಿತಗಳ ಗಾಯಗಳನ್ನು ವಾಸಿ ಮಾಡುತ್ತದೆ. ಪ್ರತಿ ದಿನ ಮೊಟ್ಟೆ ತಿಂದರೆ ನಿಮ್ಮ ದೇಹದಲ್ಲಿರುವ ಮೂಳೆಗಳು ತುಂಬಾನೇ ಬಲವಾಗುತ್ತವೆ.
ಮೆದುಳಿನ ಆರೋಗ್ಯ: ಲುಟೀನ್, ಜಿಯಾಕ್ಸಾಂತಿನ್ ಎಂಬ ಆಂಟಿಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ ಈ ಮೊಟ್ಟೆಗಳು. ಇದು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮೊಟ್ಟೆಯಲ್ಲಿರುವ ಇನ್ನೊಂದು ಅಂಶವಾದ ಚೋಲೈನ್ ಮಿದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಪ್ರತಿ ದಿನ ಮೊಟ್ಟೆ ತಿನ್ನುವುದು ನಮ್ಮ ಮನಸ್ಥಿತಿಯನ್ನು ಸಹ ಚೆನ್ನಾಗಿರುಸುತ್ತದೆ ಅಂತ ಹೇಳಲಾಗುತ್ತದೆ.
ದೇಹದ ತೂಕ ನಿರ್ವಹಣೆ: ಮೊಟ್ಟೆಯು ನಿಮ್ಮ ದೇಹದ ತೂಕವನ್ನು ಸಹ ನಿರ್ವಹಿಸಿಕೊಳ್ಳಲು ಸಹಾಯ ಮಾಡುತ್ತದೆ. ಎಂದರೆ ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶವು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ ಮತ್ತು ಹೊಟ್ಟೆ ತುಂಬಿಸಿದ ಅನುಭವ ಸಹ ಇದು ನೀಡುತ್ತದೆ. ಹಾಗಾಗಿ ಹೊಟ್ಟೆ ಹಸಿವಾಗುವುದಿಲ್ಲ ಮತ್ತು ಏನನ್ನು ಸಹ ಊಟದ ಮಧ್ಯೆ ತಿನ್ನಲು ಹೋಗುವುದಿಲ್ಲ. ಹಾಗಾಗಿ ಇದು ತೂಕ ಕಡಿಮೆ ಮಾಡಿಕೊಳ್ಳುವ ಜನರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.