ಗರ್ಭಾವಸ್ಥೆಯ ಮಧುಮೇಹವು ತಾಯಿಯ ಜೊತೆ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಆದ್ದರಿಂದ ಭಯ ಪಡದೇ ಕಾಳಜಿವಹಿಸಬೇಕಾಗುತ್ತದೆ. ಇಲ್ಲಿ ವೈದ್ಯರು ಗರ್ಭಾವಸ್ಥೆಯ ಮಧುಮೇಹದಿಂದ ತಾಯಿ-ಮಗುವಿಗೆ ಏನೆಲ್ಲಾ ತೊಂದರೆಯಾಗುತ್ತದೆ ಮತ್ತು ಅದನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ
ಗರ್ಭಾವಸ್ಥೆಯ ಮಧುಮೇಹವು ತಾಯಿ-ಮಗುವಿಗೆ ಅಪಾಯಕಾರಿಯೇ?
ಹೈದರಾಬಾದಿನ ಯಶೋದಾ ಹಾಸ್ಪಿಟಲ್ಸ್ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರರಾದ ಡಾ. ಅನುಷಾ ರಾವ್ ಪಿ, ಗರ್ಭಾವಸ್ಥೆಯ ಮಧುಮೇಹವು ಅತಿಯಾದ ಭ್ರೂಣದ ಬೆಳವಣಿಗೆಗೆ ಕಾರಣವಾಗಬಹುದು.
ಇದನ್ನು ಮ್ಯಾಕ್ರೋಸೋಮಿಯಾ ಎಂದೂ ಕರೆಯುತ್ತಾರೆ, ಇದು ಜರಾಯುವನ್ನು ದಾಟಿದ ಗ್ಲೂಕೋಸ್ ಮಟ್ಟಗಳ ಕಾರಣದಿಂದಾಗಿ ಸಂಭವಿಸುತ್ತದೆ. ಅಂದರೆ ಇದು ಸರಾಸರಿಗಿಂತ ದೊಡ್ಡದಾದ ಮಗುವಿಗೆ ಕಾರಣವಾಗಬಹುದು, ಹೆರಿಗೆಯ ಸಮಯದಲ್ಲಿ ಅಪಾಯ ಕೂಡ ಉಂಟಾಗಬಹುದು” ಎಂದು ವಿವರಿಸುತ್ತಾರೆ.
ಗರ್ಭಾವಸ್ಥೆಯಲ್ಲಿ ಮಧುಮೇಹ ಹೊಂದಿರುವ ತಾಯಂದಿರಿಗೆ ಜನಿಸಿದ ಶಿಶುಗಳು ಜನನದ ನಂತರ ಕಡಿಮೆ ರಕ್ತದ ಸಕ್ಕರೆಯನ್ನು ಹೊಂದಿರಬಹುದು ಏಕೆಂದರೆ ಅವರ ಸ್ವಂತ ಇನ್ಸುಲಿನ್ ಉತ್ಪಾದನೆಯು ಗ್ಲೂಕೋಸ್ ಅನ್ನು ನಿಯಂತ್ರಿಸಲು ಪ್ರಾರಂಭಿಸುತ್ತದೆ ಎಂದು ಡಾ. ಅನುಷಾ ರಾವ್ ಪಿ ವಿವರಿಸುತ್ತಾರೆ.
ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಲಹೆಗಾರ ಡಾ ಪ್ರಿಯಾಂಕಾ ಸುಹಾಗ್ ಮಾತನಾಡಿ, “ಗರ್ಭಧಾರಣೆಯ ಮಧುಮೇಹ ಹೊಂದಿರುವ ತಾಯಂದಿರಿಗೆ ಜನಿಸಿದ ಶಿಶುಗಳು ಜನನದ ನಂತರ ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದ ಸಕ್ಕರೆ) ಗೆ ಹೆಚ್ಚು ಒಳಗಾಗುತ್ತಾರೆ. ಮಗುವಿನ ಉಸಿರಾಟದ ವ್ಯವಸ್ಥೆಯ ಮೇಲೂ ಇದು ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.
ಇನ್ನೂ ಡಾಕ್ಟರ್ ಪ್ರಿಯಾಂಕಾ ಸುಹಾಗ್ ಅವರು ಮಗುವಿಗೆ ದೀರ್ಘಾವಧಿಯ ಪರಿಣಾಮಗಳನ್ನು ವಿವರಿಸುತ್ತಾ, ಗರ್ಭಾವಸ್ಥೆಯ ಮಧುಮೇಹವು ಬೊಜ್ಜು ಮತ್ತು ಚಯಾಪಚಯ ಸಮಸ್ಯೆ, ಸಕ್ಕರೆ ಕಾಯಿಲೆಯಂತಹ ಅಪಾಯಗಳಿಗೆ ಒಳಗಾಗಬಹುದು ಎಂದಿದ್ದಾರೆ.
ಇನ್ನೊಬ್ಬ ವೈದ್ಯರಾದ ಡಾ.ಮೋಹನ್ ಪಿ. ಅಬ್ರಹಾಂ, ಮಾತನಾಡಿ, “ಗರ್ಭಧಾರಣೆಯ ಮಧುಮೇಹವು ಕಳಪೆ ರಕ್ತಪರಿಚಲನೆಗೆ ಕಾರಣವಾಗುತ್ತದೆ. ಗರ್ಭಾವಸ್ಥೆಯ ಮಧುಮೇಹಕ್ಕೆ ಸಂಬಂಧಿಸಿದ ಹೆಚ್ಚಿದ ರಕ್ತದೊತ್ತಡದಿಂದಾಗಿ ಅಕಾಲಿಕ ಜನನ ಸಂಭವಿಸಬಹುದು.