ಯಶಸ್ವಿ ಜೈಸ್ವಾಲ್ ಅವರ ಅಬ್ಬರದ ಶತಕ ಬ್ಯಾಟಿಂಗ್ ಹಾಗೂ ಸಂದೀಪ್ ಶರ್ಮಾ ಅವರ ಮಾರಕ ಬೌಲಿಂಗ್ ದಾಳಿಯಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ನಿನ್ನೆ ಮುಂಬಯಿ ಇಂಡಿಯನ್ಸ್ ವಿರುದ್ಧ 9 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದೆ.
UIDAI Recruitment: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿದೆ ಬಂಪರ್ ಉದ್ಯೋಗಾವಕಾಶ..! ತಿಂಗಳಿಗೆ 35,000 ಸಂಬಳ
ಈ ಗೆಲುವು ಆರ್ಆರ್ ತಂಡಕ್ಕೆ ಸತತ ಮೂರು ಹಾಗೂ ಒಟ್ಟು ಏಳನೇ ವಿಜಯವಾಗಿದೆ. ಹೀಗಾಗಿ ಪ್ಲೇಆಫ್ ಹಂತಕ್ಕೆ ಬಹುತೇಕ ಏರಿದೆ. ಅತ್ತ ಮುಂಬೈ ತಂಡ ಟೂರ್ನಿಯಲ್ಲಿ ಐದನೇ ಸೋಲಿಗೆ ಒಳಗಾಗಿದೆ. ಹೀಗಾಗಿ ಪ್ಲೇಆಫ್ ಪ್ರವೇಶದ ಹಾದಿ ದುರ್ಗಮ ಎನಿಸಿದೆ.
ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್ ಮಾಡಿತು. ಅಂತೆಯೇ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.